ಕಲಬುರಗಿ: ದಶಕಗಳಿಂದ ಕಾಂಗ್ರೆಸ್ ವಶದ್ಲಲಿರುವ ಕಲಬುರಗಿ ಜಿಲ್ಲೆಯ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೈ ಪಕ್ಷದ ಕನೀಝ್ ಫಾತಿಮಾ ಅವರು ಮತ್ತೆ ಗೆಲುವು ಸಾಧಿಸಿದ್ದಾರೆ.
ಈ ಬಾರಿ ಇಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಸಿರ್ ಹುಸೇನ್ ಉಸ್ತಾದ್, ಆಪ್‌ನಿಂದ ಸಯ್ಯದ್ ಸಜ್ಜಾದ್ ಅಲಿ, ಬಿಜೆಪಿಯಿಂದ ಚಂದ್ರಕಾಂತ ಪಾಟೀಲ, ಕಾಂಗ್ರೆಸ್‌ನಿಂದ ಕನೀಝ್ ಫಾತಿಮಾ ಕಣದಲ್ಲಿದ್ದರು.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಕನೀಝ್ ಫಾತಿಮಾ 64,311 ಮತ ಗಳಿಸಿ ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಚಂದ್ರಕಾಂತ್ ಬಿ. ಪಾಟೀಲ 5,940 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
ʼಹಿಜಾಬ್- ಕೇಸರಿ ಶಾಲುʼ ಪ್ರಕರಣಕ್ಕೆ ಸಂಬಂಧಿಸಿ ಕನೀಝ್ ಫಾತಿಮ ವಿದ್ಯರ್ಥಿಗಳ ಪರ ಹೋರಾಟಕ್ಕೆ ಇಳಿದಿದ್ದರು. ನಾನು ವಿಧಾನಸೌಧದಲ್ಲಿ ಹಿಜಾಬ್ ಧರಿಸಿಯೇ ಕೂರುತ್ತೇನೆ. ಧೈರ್ಯವಿದ್ದರೆ ಯಾರಾದರೂ ತಡೆಯಲಿ. ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದು ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ್ ಪಾತೀಮಾ ಹಿಜಾಬ್ ಬೆಂಬಲಸಿ ಹೇಳಿಕೆ ನೀಡಿದ್ದರು.
ಹಿಜಾಬ್ ನಮ್ಮ ಹಕ್ಕು. ಅದಕ್ಕೆ ಬೇಕಾಗಿ ಪ್ರಾಣ ಬೇಕಾದರೂ ಕೊಡಬಹುದು ಆದರೆ ಹಿಜಾಬ್ ಅನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.