ಕರ್ನಾಟಕ: ಮುಖ್ಯಮಂತ್ರಿ ಸ್ಥಾನಕ್ಕೆ ಈಗಾಗಲೇ ಪೈಪೋಟಿ ನಡೆಯುತ್ತಿದ್ದು ಇತ್ತ ಡಿಕೆಶಿ ಅಭಿಮಾನಿಗಳು ಡಿಕೆಶಿಯೇ ಮುಖ್ಯಮಂತ್ರಿ ಆಗಬೇಕು ಎಂದರೆ ಅತ್ತ ಕಡೆಯಿಂದ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದಣ್ಣನೇ ಮುಖ್ಯಮಂತ್ರಿ ಆಗಬೇಕೆಂದು ಹಠ ಹಿಡಿದು ನಿಂತಿದ್ದಾರೆ.

ಈಗಾಗಲೇ ಶಾಸಕರಿಂದ ಅಭಿಪ್ರಾಯ ಪಡೆದುಕೊಂಡಿದ್ದು ಇಂದು ಸಿದ್ದರಾಮಯ್ಯ ಮತ್ತು ಡಿಕೆಶಿಯನ್ನು ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಬುಲಾವ್ ಕೊಟ್ಟಿದೆ.
ಇಂದು ಹುಟ್ಟುಹಬ್ಬ ಸಂಭ್ರಮದಲ್ಲಿರುವ ಡಿಕೆಶಿ ತಾನು ವಿಶ್ವಾಸವಿಟ್ಟು ಕೊಂಡಿರುವ ಅಜ್ಜಯ್ಯನ ದರ್ಶನ ಪಡೆದು ಗುರುಗಳ ಮಾರ್ಗದರ್ಶನ ಪಡೆದುಕೊಂಡು ಇಂದು ದೆಹಲಿಗೆ ತೆರಳಲಿದ್ದೇನೆ ಎಂದಿದ್ದಾರೆ.ದೆಹಲಿಯಲ್ಲಿ ಡಿಕೆಶಿಗೆ ಹುಟ್ಟುಹಬ್ಬಕ್ಕೆ ಸಿಎಂ ಪಟ್ಟ ಗಿಫ್ಟ್ ಆಗಿ ಸಿಗುತ್ತಾ ನೋಡಬೇಕಾಗಿದೆ.
ಮುಖ್ಯಮಂತ್ರಿ ನೀವೇ ಆಗ್ತೀರಾ ಎಂದ ಪ್ರಶ್ನೆಗೆ ಡಿಕೆಶಿ ನನಲ್ಲೇನೂ ಇಲ್ಲಾ ಎಲ್ಲಾ ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುವುದೋ ನೋಡೋಣ ಅವರ ಮೇಲೆ ವಿಶ್ವಾಸ ಇದೆ ಎಂದು ನುಡಿದರು. 135 ಶಾಸಕರು ನನ್ನ ಕೈಯಲ್ಲಿದ್ದು ಅದಲ್ಲದೇ ಕೆಪಿಸಿಸಿ ಅಧ್ಯಕ್ಷ ಕೂಡ ನಾನಗಿದ್ದೇನೆ. ನನ್ನ ಅವಧಿಯಲ್ಲಿ ರಾತ್ರಿ ಹಗಲು ಎನ್ನದೆ ದುಡಿದ ಕಾರಣ ಈ ರೀತಿಯ ಗೆಲುವನ್ನು ಕಂಡಿದ್ದೇವೆ ಕೆಪಿಸಿಸಿ ಅಧ್ಯಕ್ಷ ಆಗಿರುವವರೇ ರಾಜ್ಯದ ಮುಖ್ಯಮಂತ್ರಿಯಾಗುವುದು ಸಹಜ ಅಲ್ಲವೇ ಎಂದು ಟಾಂಗ್ ನೀಡಿದ ರೀತಿಯಲ್ಲಿ ಮಾತನಾಡಿದ್ದಾರೆ.
ಇತ್ತ ಸಿದ್ದರಾಮಯ್ಯ ರಾಷ್ರೀಯ ವಾಹಿನಿಯಲ್ಲಿ ಮಾತನಾಡುತ್ತಾ ಅತೀ ಹೆಚ್ಚು ಶಾಸಕರು ನನ್ನ ಪರವಾಗಿದ್ದು ನನಗೆ ಓಟ್ ಹೆಚ್ಚು ಬೀಳುವ ವಿಶ್ವಾಸ ನಂಬಿಕೆ ಇದೆ.ಅದೇ ರೀತಿಯಾಗಿ ನಾನೆ ಮುಖ್ಯಮಂತ್ರಿ ಎಂದು ನುಡಿದಿದ್ದು ಕೊನೆಗೂ ಇಬ್ಬರಲ್ಲಿ ಸಿಎಂ ಕುರ್ಚಿ ಯಾರು ಪಾಲಾಗುತ್ತೆ ಎಂದು ಕಾದು ನೋಡಬೇಕಾಗಿದ್ದು ಇಂದು ರಾತ್ರಿಯೊಳಗೆ ಅಂತಿಮವಾಗಲಿದೆ ಎಂದು ತಿಳಿದು ಬಂದಿದೆ.