';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ರಾಜ್ಯ ವಿಧಾನ ಸಭೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹೀನಾಯ ಸೋಲಾಗಿದ್ದು ಕಳೆದ 35 ವರ್ಷಗಳಲ್ಲಿ ಈ ರೀತಿಯ ಸೋಲನ್ನು ಬಿಜೆಪಿ ಕಂಡಿರಲಿಲ್ಲ.ಈ ಒಂದು ಸೋಲಿನಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಡಿವಿಯವರ ವಿರುದ್ದ ಪುತ್ತೂರಿನಲ್ಲಿ ಎಲ್ಲರೂ ಕಿಡಿಕಾರಿದ್ದರಲ್ಲದೇ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಈಗಾಗಲೇ ದ.ಕನ್ನಡ ಜಿಲ್ಲೆಯಲ್ಲಿ ಇವರಿಬ್ಬರಿಗೂ ಉಳಿಗಾಲವಿಲ್ಲದಾಗಿದ್ದು ಇವರಿಬ್ಬರ ವಿರುದ್ದವೂ ಅಸಮಾಧಾನ ಕೇಳಿ ಬಂದಿದ್ದು ಇದರ ಪರಿಣಾಮವಾಗಿ ಪುತ್ತೂರಿನ ಸರಕಾರಿ ಬಸ್ ನಿಲ್ದಾಣದಲ್ಲಿ ಇಬ್ಬರಿಗೂ ಶ್ರದ್ಧಾಂಜಲಿ ಕೋರಿ ಚಪ್ಪಲಿಯ ಹಾರವನ್ನು ಹಾಕಿದ್ದ ಬ್ಯಾನರ್ ಕಂಡುಬಂದಿದೆ.
ಇದರ ಬಗ್ಗೆ ಪೊಲೀಸರು ಯಾವ ರೀತಿಯ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದ್ದು ಈ ಬಗ್ಗೆ ಈಗಾಗಲೇ ಪುತ್ತೂರಿನ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದು ದೂರು ದಾಖಲಿಸಿದ್ದಾರೆ. ವಿಷಯ ಸಾರ್ವಜನಿಕರ ಗಮನಕ್ಕೆ ಬರುವ ಮುಂಚೆಯೇ ನಗರಸಭೆ ಅಧಿಕಾರಿಗಳು ಬ್ಯಾನರ್ ತೆರವುಗೊಳಿಸಿದ ಬಗ್ಗೆ ವರದಿಯಾಗಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>