';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ತನ್ನ ಸಹೋದರನ ಹುಟ್ಟುಹಬ್ಬಕ್ಕೆ ಬಾಲ್ಯ ಕಾಲದ ಫೋಟೋವನ್ನು ಹಂಚಿಕೊಂಡು ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರ ಸಹೋದರತ್ವದ ಪ್ರೀತಿ ಇದೀಗ ಎಲ್ಲೆಡೆ ಬಾರೀ ವೈರಲ್ ಆಗುತ್ತಿದೆ.
ಸಹೋದರ ಡಿ.ಕೆ ಸುರೇಶ್ ರವರ ಇಂದು ಹುಟ್ಟುಹಬ್ಬವಾಗಿದ್ದು ತನ್ನ ಅಧಿಕೃತ ಪೇಜ್ ಗಳಲ್ಲಿ ಡಿ.ಕೆ ಶಿವಕುಮಾರ್ ರವರು ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡು,
ಸುಖ-ದುಃಖ, ನೋವು-ನಲಿವು ಹೀಗೆ ಜೀವನದ ಪ್ರತಿಯೊಂದು ಹಂತದಲ್ಲೂ ಜೊತೆಗಿರುವ ಸಹೋದರ, ಹಿತೈಷಿ ನೀನು. ನಿನ್ನ ಜನಪರ ಕಾಳಜಿ, ಸಮಾಜಮುಖಿ ಕಾರ್ಯಗಳು ಅಣ್ಣನಾಗಿ ನಾನು ಹೆಮ್ಮೆ ಪಡುವಂತಹುದು. ನೀ ಕಂಡ ಕನಸುಗಳೆಲ್ಲ ನನಸಾಗಲಿ, ಉತ್ತಮ ಆಯುರಾರೋಗ್ಯ ನಿನ್ನದಾಗಿರಲಿ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸಹೋದರ ಶ್ರೀ ಡಿ.ಕೆ ಸುರೇಶ್.
ಎಂದು ಬರೆದು ಶುಭಾಹಾರೈಸಿದ್ದಾರೆ.
ಇದೀಗ ಸರಳತೆಯ ಪ್ರತೀಕ ಎಂಬಂತೆ ಅಣ್ಣ ತಮ್ಮಂದಿರ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಸದ್ದು ಮಾಡುತ್ತಿದೆ.