dtvkannada

'; } else { echo "Sorry! You are Blocked from seeing the Ads"; } ?>

ಐಪಿಎಲ್​ನ​ 16ನೇ ಸೀಸನ್ ಫೈನಲ್​ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ತಂಡವು ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ್​ಮನ್ ಗಿಲ್ (39) ಹಾಗೂ ವೃದ್ಧಿಮಾನ್ ಸಾಹ (54) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಗಿಲ್ ಔಟಾದ ಬಳಿಕ ಕ್ರೀಸ್​ಗೆ ಆಗಮಿಸಿದ ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

'; } else { echo "Sorry! You are Blocked from seeing the Ads"; } ?>

8ನೇ ಓವರ್​ ವೇಳೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ ಆರಂಭದ 12 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 10 ರನ್ ಮಾತ್ರ. ಆದರೆ ತಂಡದ ಮೊತ್ತ 100ರ ಗಡಿದಾಟುತ್ತಿದ್ದಂತೆ ಸಾಯಿ ಕೂಡ ಬ್ಯಾಟಿಂಗ್ ಗೇರ್ ಬದಲಿಸಿದರು. ಸಾಯಿಯ ಅಬ್ಬರ ಶುರುವಾಗುತ್ತಿದ್ದಂತೆ ಅತ್ತ ಸಿಎಸ್​ಕೆ ಬೌಲರ್​ಗಳು ಲಯ ತಪ್ಪಿದರು.
ಪರಿಣಾಮ 33 ಎಸೆತಗಳಲ್ಲಿ ಸಾಯಿ ಸುದರ್ಶನ್ ಅರ್ಧಶತಕ ಪೂರೈಸಿದರು. ಈ ವೇಳೆ ಕ್ರೀಸ್​ಗೆ ಆಗಮಿಸಿದ ಹಾರ್ದಿಕ್ ಪಾಂಡ್ಯ ಯುವ ಆಟಗಾರನಿಗೆ ಮನಸೊ ಇಚ್ಛೆ ಬ್ಯಾಟ್ ಬೀಸುವಂತೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಅಲ್ಲಿಂದ ಶುರುವಾದ ಸಾಯಿ ಸುದರ್ಶನ್ ಸಿಡಿಲಬ್ಬರಕ್ಕೆ ಚೆನ್ನೈ ಸೂಪರ್ ಕಿಂಗ್ ಬೌಲರ್​ಗಳು ಪರದಾಡಿದರು.

19ನೇ ಓವರ್​ವರೆಗೂ ಸಿಡಿಲಬ್ಬರ ಮುಂದುವರೆಸಿದ ಸಾಯಿ ಇನ್ನೇನು ಶತಕ ಪೂರೈಸಲಿದ್ದಾರೆ ಅನ್ನುವಷ್ಟರಲ್ಲಿ ಮತೀಶ ಪತಿರಾಣ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು. ಆದರೆ ಅದಾಗಲೇ ಕೇವಲ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ ಸಾಯಿ ಸುದರ್ಶನ್ 96 ರನ್ ಚಚ್ಚಿದ್ದರು. ಪರಿಣಾಮ ಸಿಎಸ್​ಕೆ ತಂಡವು ನಿಗದಿತ 20 ಓವರ್​ಗಳಲ್ಲಿ 214 ರನ್​ಗಳಿಸಲು ಸಾಧ್ಯವಾಯಿತು.

'; } else { echo "Sorry! You are Blocked from seeing the Ads"; } ?>

215 ರನ್​ಗಳ ಗುರಿಯೊಂದಿಗೆ ಕ್ರೀಸ್​ಗೆ ಇಳಿದ ಸಿಎಸ್​ಕೆ ಇನಿಂಗ್ಸ್​ಗೆ ವರುಣ ಅಡ್ಡಿಪಡಿಸಿದನು. ಹೀಗಾಗಿ ಓವರ್​ಗಳ ಕಡಿತದೊಂದಿಗೆ ಪಂದ್ಯ ಮುಂದುವರೆಸಲಾಯಿತು. ಅದರಂತೆ ಸಿಎಸ್​ಕೆ ತಂಡಕ್ಕೆ 15 ಓವರ್​ಗಳಲ್ಲಿ 171 ರನ್​ಗಳ ಗುರಿ ನೀಡಲಾಯಿತು.

ಈ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ ತಂಡವು ಕೊನೆಯ ಓವರ್ನಲ್ಲಿ 13 ರನ್ ಗಳಿಸಬೇಕಿತ್ತು. ಅದರಲ್ಲೂ ಕೊನೆಯ 2 ಎಸೆತಗಳಲ್ಲಿ 10 ರನ್ ಬೇಕಿದ್ದ ವೇಳೆ ರವೀಂದ್ರ ಜಡೇಜಾ ಸಿಕ್ಸ್ ಹಾಗೂ ಫೋರ್ ಬಾರಿಸುವ ಮೂಲಕ ಸಿಎಸ್ಕೆ ತಂಡಕ್ಕೆ 5 ವಿಕೆಟ್ಗಳ ಜಯ ತಂದುಕೊಟ್ಟರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!