';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕಡಬ: ಮಸ್ಕತ್ತಿನಲ್ಲಿ ಕಡಬದ ಕೊಯಿಲದ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಕಡಬದ ಕೊಯಿಲ ಗ್ರಾಮದ ಸುಣ್ಣಾಡಿ ದಿ.ಮೋನಪ್ಪ ಪೂಜಾರಿಯವರ ಪುತ್ರ ಅವಿವಾಹಿತರಾಗಿದ್ದ ಸಂದೇಶ್ (೩೨) ಎಂದು ತಿಳಿದು ಬಂದಿದೆ.
ಒಮಾನ್ ದೇಶದ ಮಸ್ಕತ್ತಿನಲ್ಲಿ ನೀರಿನ ಕಂಪೆನಿಯೊಂದರಲ್ಲಿ ಲೈನ್ ಸೇಲರ್ ಉದ್ಯೋಗದಲ್ಲಿದ್ದ ಸಂದೇಶ್ ರವರು ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದು ಇವರ ಸಹೋದರ ಸಂತೋಷ್ ಕೂಡಾ ಮಸ್ಕತ್ನಲ್ಲೇ ಉದ್ಯೋಗದಲ್ಲಿದ್ದು ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು.
ಸಂಸ್ಥೆಯಲ್ಲಿ ಉತ್ತಮ ವೇತನ ದೊಂದಿಗೆ ಯಾವುದೇ ಒತ್ತಡವಿಲ್ಲದ ಉದ್ಯೋಗ ಇದ್ದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಸಮಸ್ಯೆಗಳಿರಲಿಲ್ಲ ಎಂದು ತಿಳಿದು ಬಂದಿದ್ದು ಆತ್ಮಹತ್ಯೆಗೆ ಮುನ್ನ “ಸಾರಿ ಅಣ್ಣಾ” ಎಂದು ಬರೀ ಒಂದು ಲೈನಿನ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ವರದಿಯಾಗಿದೆ.