ಪುತ್ತೂರು: ಪುತ್ತೂರಿನಾದ್ಯಂತ ಕಲಿಕಾ ಮತ್ತು ಶೈಕ್ಷಣಿಕ ವಿಭಾಗದಲ್ಲಿ ಪ್ರಸಿದ್ದಿ ಪಡೆದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಜನಮನ್ನಣೆ ಗಳಿಸುತ್ತಿರುವ ಅಕ್ಷಯ ಕಾಲೇಜಿನ ಆಶ್ರಯದಲ್ಲಿ ಆದ್ವಯ ಸಾಹಿತ್ಯ ಸಂಘವನ್ನು ಉದ್ಘಾಟಿಸಿಲಾಯಿತು.
ಈ ಒಂದು ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕಿನ ಅಧ್ಯಕ್ಷರಾದ ಉಮೇಶ್ ನಾಯಕ್‌ರವರ ದಿವ್ಯ ಹಸ್ತದಿಂದ ಉಧ್ಘಾಟನೆ ನೇರವೆರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳು ಕಲಿಕೆಯ ಜೊತೆಗೆ ಜನರಲ್ ನಾಲೆಜ್ ಮತ್ತು ಸಾಹಿತ್ಯ ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ವಿದ್ಯಾರ್ಥಿಗಳಾಗಿ ಮುಂದವರಿಯುವಲ್ಲಿ ಯಶಸ್ವಿಯಾಗಬೇಕು ಎನ್ನುವ ಬಯಕೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನೂತನ “ಅದ್ವಯ” ಸಾಹಿತ್ಯ ಸಂಘವನ್ನು ರಚಿಸಿಲಾಯಿತು. ಇದರ ಅಧ್ಯಕ್ಷರಾಗಿ ಲಿಖಿತ್ ಎವಿ, ಉಪಾಧ್ಯಕ್ಷರಾಗಿ ಭವ್ಯಶ್ರೀ ಆಯ್ಕೆಯಾದರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಆಡಳಿತ ಅಧಿಕಾರಿ ಅರ್ಪಿತ್ ಟಿ.ಎ ಹಾಗೂ ಅದೇ ರೀತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ ಅದ್ವಯ ಸಾಹಿತ್ಯ ಸಂಘದ ಸಂಯೋಜಕಿಯಾದ ಆಶಿಕಾ ಕೂಡ ಉಪಸ್ಥಿತರಿದ್ದರು.
ಅದ್ವಯ ಸಾಹಿತ್ಯ ಸಂಘದ ಅಧ್ಯಕ್ಷರಾದ ಲಿಖಿತ್ ಎ.ವಿ ಸ್ವಾಗತಿಸಿ, ಅನ್ನಪೂರ್ಣ ಕಾರ್ಯಕ್ರಮವನ್ನು ನಿರೂಪಿಸಿ ಉಪಾಧ್ಯಕ್ಷೆ ಭವ್ಯಶ್ರೀ ವಂದಿಸಿದರು.