ಚಾಮರಾಜನಗರ: ತಾಲೂಕಿನ ಭೋಗಾಪುರ ಬಳಿಯ ಕೆ ಮೂಕಹಳ್ಳಿಯಲ್ಲಿ ಕಿರಣ್ ಲಘು ವಿಮಾನ ಪತನವಾಗಿದ್ದು, ಪೈಲಟ್‌ಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆ ಸಮಯಕ್ಕೆ ಲಘು ವಿಮಾನ ಪತನವಾಗಿದೆ. ವಿಮಾನ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ವಿಮಾನದಲ್ಲಿ ಇಬ್ಬರು ಪೈಲಟ್ ಗಳು ಇದ್ದು, ಪ್ಯಾರಾಚೂಟ್ ಮೂಲಕ ಹಾರಿ ಪಾರಾಗಿದ್ದಾರೆ. ಒಬ್ಬರು ಮಹಿಳಾ ಪೈಲಟ್ ಕೂಡ ಇದ್ದರು ಎಂದು ತಿಳಿದುಬಂದಿದೆ. ಇನ್ನು ವಿಮಾನ ಪತನವಾಗುತ್ತಲೇ ಪತನವಾದ ವಿಮಾನವನ್ನು ನೋಡಲು ಅಕ್ಕ ಪಕ್ಕದ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.
ಇದೊಂದು ಸೇನಾ ತರಬೇತಿ ವಿಮಾನ ಎಂದು ತಿಳಿದುಬಂದಿದೆ. ವಿಂಗ್ ಕಮಾಂಡರ್ ತೇಜಪಾಲ್ ಅವರಿಂದ ಭೂಮಿಕಾ ಅವರಿಗೆ ತರಬೇತಿ ನೀಡಲು ಬಂದಿದ್ದರು. ಈ ವೇಳೆ ತಾಂತ್ರಿಕ ಸಮಸ್ಯೆಯಿಂದ ವಿಮಾನ ಪತನವಾಗಿದೆ. ಈ ಘಟನೆಯು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಅದಲ್ಲದೇ ಸಂಬಂಧಪಟ್ಟ ಸೇನೆಯ ಅಧಿಕಾರಿಗಳು, ಸ್ಥಳಕ್ಕೆ ಹೆಚ್ಚುವರಿ ಡಿಸಿ ಕಾತ್ಯಾಯಿನಿ ದೇವಿ ಹಾಗೂ ಹೆಚ್ಚುವರಿ ಎಸ್‌ಪಿ ಉದೇಶ್ ಭೇಟಿ ನೀಡಿ ಪರಿಶೀಲನೆ ಸ್ಥಳಕ್ಕೆ ಧಾವಿಸಿದ್ದಾರೆ. ಇಬ್ಬರು ಪೈಲಟ್‌ಗಳನ್ನು ಹೆಲಿಕಾಪ್ಟರ್‌ನಲ್ಲಿ ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಮಾನ ಪತನಕ್ಕೆ ಕಾರಣಗಳನ್ನು ತಿಳಿಯಲು ತನಿಖೆ ನಡೆಸಲು ವಾಯು ಸೇನೆ ಸೂಚಿಸಿದೆ.
ಗುರುವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ವಿಮಾನ ಪತನವಾಗಿದೆ. ವಿಮಾನದಲ್ಲಿ ಇಬ್ಬರು ಪೈಲಟ್ ಗಳು ಇದ್ದು ಅವರು ಪ್ಯಾರಾಚೂಟ್ ಮೂಲಕ ಪಾರಾಗಿದ್ದಾರೆ.
ಪತನವಾದ ವಿಮಾನದ ಅವಶೇಷ ನೋಡಲು ಅಕ್ಕ ಪಕ್ಕದ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದಾರೆ.