ಬೆಳಗಾವಿ: ಹೆತ್ತ ತಾಯಿ ಮತ್ತು ಮಗನ ಸಂಬಂಧ ಅದು ಹೇಳಿತೀರದು..ಮಗ ಎಷ್ಟೇ ತಪ್ಪು ಮಾಡಿದರು ಎಷ್ಟೇಕೆಟ್ಟವನಾದರು ಎಷ್ಟೇ ದೊಡ್ಡವನಾದರು ತಾಯಿಗೆ ಮಗ ಮಗನೇ ಎಂದಿಗೂ ಇಲ್ಲೊಂದುಕಡೆ ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿಯೂ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
![](http://dtvkannada.in/wp-content/uploads/2023/06/wrestlers-farmers-e1685562440183.jpg)
ಘಟನೆಯಲ್ಲಿ ಮೃತಪಟ್ಟ ತಾಯಿ ರುದ್ರವ್ವ ತಳವಾರ (70) ಎಂದು ಗುರುತಿಸಿದ್ದು ತನ್ನ ಮಗ ಹಣ್ಣಿನ ವ್ಯಾಪಾರಿಯಾಗಿದ್ದು ಬಾಳಪ್ಪ ತಳವಾರ (50) ಮರದಿಂದ ಬಿದ್ದು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.
ಮೃತಪಟ್ಟ ಬಾಳಪ್ಪ ತಳವಾರ ಅವರು ಹಣ್ಣಿನ ವ್ಯಾಪಾರಿಯಾಗಿದ್ದು ಎಂದಿನಂತೆ ಹಣ್ಣು ಕೀಳಲೆಂದು ನೇರಳೆ ಮರಕ್ಕೆ ಹತ್ತಿದ್ದಾರೆ. ಈ ವೇಳೆ ಆಯತಪ್ಪಿ ಮರದ ಮೇಲಿಂದ ಬಿದ್ದು ಬಾಳಪ್ಪ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಹೆತ್ತು ಹೊತ್ತು ಸಾಕಿದ ತನ್ನ ಮಗ ಮೃತಪಟ್ಟ ಸುದ್ದಿ ತಿಳಿದ ಬಾಳಪ್ಪ ಅವರ ತಾಯಿ ಸ್ಥಳದಲ್ಲಿ ಹೃದಯಾಘಾತದ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.