dtvkannada

'; } else { echo "Sorry! You are Blocked from seeing the Ads"; } ?>

ಬೆಂಗಳೂರು: ಕಾಂಗ್ರೇಸ್ ಪಕ್ಷವು ಚುನಾವಣೆಗೆ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳಾದ 200 ಯೂನಿಟ್ ವಿದ್ಯುತ್, ಮಹಿಳೆಯರಿಗೆ ಉಚಿತ ಪ್ರಯಾಣ, ಯುವ ನಿಧಿ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗಳು ಮುಂದಿನ ದಿನಗಳಲ್ಲಿ ಜಾರಿಯಾಗುವುದು ನಿಶ್ಚಿತ ಎಂದು ಕೆ.ಪಿ.ಸಿ.ಸಿ ಮುಖ್ಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ತಿಳಿಸಿದ್ದಾರೆ.

2013 ರಲ್ಲಿ ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಾರೆ ಮತ್ತು ನುಡಿದಂತೆ ನಡೆದಿರುತ್ತದೆ. ಕಾಂಗ್ರೇಸ್ ಪಕ್ಷವು ಎಂದೂ ಜನರಿಗೆ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ ಜನರ ಆಶೋತ್ತರಗಳನ್ನು ಈಡೇರಿಸಿವೆ.
ಕಾಂಗ್ರೆಸ್ ಪಕ್ಷ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳು 30 ಸಾವಿರಕ್ಕಿಂತ ಕೆಳಗೆ ಇರುವ ಆದಾಯದಾರರಿಗೆ ಮತ್ತು ಬಿ.ಪಿ.ಎಲ್.ಕಾರ್ಡ್ ದಾರರಿಗೆ ಮಾತ್ರ ನೀಡಬೇಕು. ಆದಾಯ ತೆರಿಗೆ ಪಾವತಿದಾರರಿಗೆ, ಎಂ.ಎಲ್.ಎ.ಎಂ.ಪಿ. ಮತ್ತು ಅಧಿಕಾರಿಗಳಿಗೆ ಮಾಸಿಕ 30 ಸಾವಿರಕ್ಕೂ ಮಿಕ್ಕಿ ಆದಾಯ ಇರುವವರಿಗೆ ನೀಡಬಾರದು ನಾನು ಮತ್ತು ನನ್ನ ಕುಟುಂಬ ಈ ಐದು ಗ್ಯಾರಂಟಿಗಳನ್ನು ಸ್ವೀಕರಿಸುವುದಿಲ್ಲ. ಹೀಗೆ ಘೋಷಿಸುವಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳಿಗೆ ಪಂತಾಹ್ವಾನ ನೀಡಿದರು

'; } else { echo "Sorry! You are Blocked from seeing the Ads"; } ?>

ಈ ಯೋಜನೆ ಅರ್ಹ ಬಡವರಿಗೆ ಮಾತ್ರ ತಲುಪಲಿ. ಬಿಜೆಪಿ ನಾಯಕರು ರಾಜ್ಯದಲ್ಲಿ ಕೇಂದ್ರದಲ್ಲಿ ಪಕ್ಷ ನೀಡಿದ ಬಹುತೇಕ ಭರವಸೆಗಳು ಇನ್ನೂ ಮರೀಚಿಕೆಯಾಗಿದೆ. 9 ವರ್ಷದಲ್ಲಿ 18 ಕೋಟಿ ಉದ್ಯೋಗ ಸೃಷ್ಟಿ ಎಲ್ಲಿದೆ? ಬೆಲೆ ಏರಿಕೆ ಕಡಿವಾಣ ಎಲ್ಲಿದೆ?ದೇಶದ ಕಾನೂನು ಸುವ್ಯವಸ್ಥೆ ಏನಾಗಿದೆ? ಮಣಿಪುರ ರಾಜ್ಯದಲ್ಲಿ ಆಗುತ್ತಿರುವ ಮರಣ ಹೋಮವನ್ನು ನೋಡುತ್ತಾ ನಿಂತ ಬಿಜೆಪಿ ನಾಯಕರು ಏನು ಕ್ರಮ ಕೈಗೊಂಡಿದ್ದಾರೆ? ಪ್ರಧಾನಿ ಯಾವ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದರೆ ಎಂದು ಆಕ್ರೋಶಭರಿತವಾಗಿ ಪ್ರಶ್ನಿಸಿದ ಟಿ ಎಂ ಶಾಹಿದ್, ಬಿ.ಜೆ.ಪಿ.ಯವರು ಸೋಲಿನ ಹತಾಶೆಯಿಂದ ಗ್ಯಾರಂಟಿಗಳ ಬಗ್ಗೆ ಇಲ್ಲ ಸಲ್ಲದ ತಪ್ಪು ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಿ ಜನರಲ್ಲಿ ಗೊಂದಲವನ್ನು ಸ್ರಷ್ಠಿಸುತ್ತಿದ್ದಾರೆ. ಕೇಂದ್ರದಲ್ಲಿರುವ ನರೇಂದ್ರ ಮೋದಿಯವರ ಸರಕಾರ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ವಂಚಿಸುತ್ತಿದ್ದಾರೆ. ವರ್ಷಕ್ಕೆ 18 ಸಾವಿರ ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದು ಹೇಳಿ ವರ್ಷಕ್ಕೆ ಒಂದು ಲಕ್ಷ ಉದ್ಯೋಗವನ್ನು ನೀಡಿರುವುದಿಲ್ಲ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿ ಜನರನ್ನು ವಂಚಿಸಿರುತ್ತಾರೆ.

ನರೇಂದ್ರ ಮೋದಿ ಹಾಗೂ ಅಮಿತ್ ಶಾರವರು ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ನಡೆಸುತ್ತಿರುವುದು ಜನರಿಗೆ ಅರ್ಥವಾಗಿದೆ, ಮತದಾರರು ಈಗ ಪ್ರಬುದ್ದರಾಗಿದ್ದಾರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಯು.ಪಿ.ಎ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರುತ್ತದೆ ಸಮುದಾಯದ ನಡುವೆ ದ್ವೇಷದ ಭಾವನೆಯನ್ನು ಹೋಗಲಾಡಿಸಿ ಪ್ರೀತಿ ಪ್ರೇಮದ ಭಾರತ ಆಗುತ್ತದೆ ಎಂದರು.

'; } else { echo "Sorry! You are Blocked from seeing the Ads"; } ?>

ಕರ್ನಾಟಕದಲ್ಲಿ ಜೆ.ಡಿ.ಎಸ್ ಮತ್ತು ಬಿಜೆಪಿಯವರ ಕುತಂತ್ರ ರಾಜಕೀಯ ಇನ್ನು ನಡೆಯುವುದಿಲ್ಲ ಮತದಾರರು ಎರಡು ಪಕ್ಷವನ್ನು ತಿರಸ್ಕರಿಸಲಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಜನಪರವಾದ ಆಡಳಿತ ನಡೆಯುತ್ತದೆ. ನುಡಿದಂತೆ ನಡೆಯುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಟಿ.ಎಂ ಶಹೀದ್ ತೆಕ್ಕಿಲ್ ತಿಳಿಸಿದರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!