ಒಡಿಶಾ: ಬಹನಾಗ ರೈಲು ನಿಲ್ದಾಣದ ಬಳಿ 3 ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆ ಆಗಿದ್ದು, ಘಟನೆಯಲ್ಲಿ 747 ಜನರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೂಡ್ಸ್ ರೈಲಿಗೆ ಕೋಡಮಂಡಲ್ ಎಕ್ಸ್ಪ್ರೆಸ್ ಟ್ರೈನ್ ಡಿಕ್ಕಿ ಹೊಡೆದಿದ್ದು, ಪಕ್ಕದ ಹಳಿ ಮೇಲೆ ಬಿದ್ದಿದೆ. ಇದೇ ವೇಳೆ ಅದೇ ಟ್ರ್ಯಾಕ್ನಲ್ಲಿ ಬಂದ ಬೆಂಗಳೂರು ಹೌರಾ ಎಕ್ಸ್ಪ್ರೆಸ್ ರೈಲು ಬಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಕೋರಮಂಡಲ್ ಎಕ್ಸ್ಪ್ರೆಸ್ ಟ್ರೈನ್ನಲ್ಲಿದ್ದ ಜನರು ಮೃತಪಟ್ಟಿದ್ದಾರೆ. ರೈಲು ಅಪಘಾತ ಪ್ರಕರಣದ ಎದೆ ಝಲ್ ಎನಿಸೋ ಏರಿಯಾಲ್ ವೀವ್ ದೃಶ್ಯ ಇಲ್ಲಿದೆ ನೋಡಿ.
ಭೀಕರ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆ ಆಗಿದ್ದು, ಘಟನೆಯಲ್ಲಿ 747 ಜನರಿಗೆ ಗಾಯಗಳಾಗಿವೆ.
ರೈಲ್ವೆ ಬೋಗಿಗಳ ತೆರವು ಕಾರ್ಯಾಚರಣೆ
ಬಹನಾಗ ರೈಲು ನಿಲ್ದಾಣದ ಬಳಿ 3 ರೈಲುಗಳ ನಡುವೆ ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಕ್ತಾಯ ಆಗಿದೆ. ರೈಲ್ವೆ ಇಲಾಖೆ ಸಿಬ್ಬಂದಿಗಳು ಬೋಗಿಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಹಿಟಾಚಿಗಳ ಮೂಲಕ ರೈಲ್ವೆ ಬೋಗಿಗಳ ತೆರವು ಕಾರ್ಯಾಚರಣೆ ಮಾಡಲಾಗಿದೆ.
ಈಶಾನ್ಯ ರಾಜ್ಯಗಳ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ:
ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತ ಸಂಬಂಧ ಬೆಂಗಳೂರಿನಿಂದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ತೆರಳಬೇಕಾಗಿದ್ದ ರೈಲುಗಳ ಪ್ರಯಾಣ ರದ್ದಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಯಶವಂತಪುರ ಜಂಕ್ಷನ್ ಗಳಲ್ಲಿಯೇ ಪ್ರಯಾಣಿಕರು ಉಳಿದುಕೊಂಡಿದ್ದಾರೆ. ಸಿಎಂ ಹಾಗೂ ಡಿಸಿಎಂ ನಿರ್ದೇಶನದಂತೆ ಬಿಬಿಎಂಪಿ ವತಿಯಿಂದ ಈಶಾನ್ಯ ರಾಜ್ಯಗಳ ಪ್ರಯಾಣಿಕರಿಗೆ ತಿಂಡಿ, ಊಟ, ವಸತಿ ಸೇರಿದಂತೆ ಚಿಕ್ಕ ಮಕ್ಕಳಿಗೆ ಬಿಸಿಹಾಲು ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಪ್ರಯಾಣಿಕರಿಗೆ ಅಗತ್ಯವಾದ ತುರ್ತು ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತರಿಂದ ಮಾಹಿತಿ ನೀಡಲಾಗಿದೆ