ಜಿ.ಸಿ.ಸಿ ಹೆಲ್ಪ್’ಲೈನ್ ಟ್ರಸ್ಟ್(ರಿ) ಅಮ್ಮುಂಜೆ ಆಯೋಜಿತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಮತ್ತು ಕೆ.ಎಂ.ಸಿ ಆಸ್ಪತ್ರೆ ರಕ್ತನಿಧಿ ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು, ಮುನವ್ವಿರುಲ್ ಇಸ್ಲಾಂ ಅರೇಬಿಕ್ ಶಾಲೆ, ಬೀರಂದಡಿ ಅಮ್ಮುಂಜೆ ಯಲ್ಲಿ ನಡೆಯಿತು.
ಮುಹಿಯದ್ದೀನ್ ಜುಮಾ ಮಸೀದಿ ಖತೀಬರಾದ ಅಬ್ದುಲ್ ಖಾದರ್ ಸಖಾಫಿ ರವರು ದುಃಆಶಿರ್ವಾಚನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆಎಂಸಿ ಆಸ್ಪತ್ರೆ ವೈಧ್ಯಾಧಿಕಾರಿ ನಿಖಿತ ರವರು ರಕ್ತದಾನದ ಮಹತ್ವದ ಕುರಿತು ವಿವರಿಸಿದರು.
ವೇದಿಕೆಯಲ್ಲಿ ಮೊಹಿಯದ್ದೀನ್ ಜುಮಾ ಮಸೀದಿ ಸದರ್ ಉಸ್ತಾದರಾದ ಅಬೂಬಕ್ಕರ್ ಸಖಾಫಿ, ಮೊಹಿಯದ್ದೀನ್ ಜುಮಾ ಮಸೀದಿ ಅಮ್ಮುಂಜೆ ಇದರ ಅಧ್ಯಕ್ಷರಾದ ಇಸ್ಮಾಯಿಲ್ ಆರ್.ಟಿ.ಓ, ಉಪಾಧ್ಯಕ್ಷರಾದ ಮೊಯಿದಿನಬ್ಬ ಎಮ್ ಕೆ,
ಜಿಸಿಸಿ ವರ್ಕಿಂಗ್ ಕಮಿಟಿ ಅಧ್ಯಕ್ಷರಾದ ರಿಯಾಝ್ ಕಣಿಯೂರು, ಜಿಸಿಸಿ ವರ್ಕಿಂಗ್ ಕಮಿಟಿ ಮಾಜಿ ಅಧ್ಯಕ್ಷರಾದ ಮಹಮ್ಮದ್ ಡಿ, ಜಿಸಿಸಿ ಟ್ರಸ್ಟ್ ಮಾಜಿ ಅಧ್ಯಕ್ಷರಾದ ಮಜೀದ್, ಜಿಸಿಸಿ ಸದಸ್ಯರಾದ ಹಕೀಂ ಎಮ್ ಕೆ ಹಾಗೂ ಮಜೀದ್ ರವರು ಉಪಸ್ಥಿತರಿದ್ದರು.
ಒಟ್ಟು 72 ಮಂದಿ ಜನಸ್ನೇಹಿ ರಕ್ತದಾನಿಗಳು ಸ್ವಯಂಪ್ರೇರಿತವಾಗಿ ಆಗಮಿಸಿ ರಕ್ತದಾನ ಮಾಡುವುದರ ಮೂಲಕ ಜೀವದಾನಿಗಳಾದರು. ವಿಶೇಷವಾಗಿ ಮಹಿಳೆಯರೂ ಕೂಡ ಆಗಮಿಸಿ ರಕ್ತದಾನ ಮಾಡುವ ಮೂಲಕ ಮಾದರಿಯಾದರು.
ರಕ್ತದಾನ ಮಾಡಿದ ಸರ್ವರಿಗೂ ಜಿಸಿಸಿ ಹೆಲ್ಪ್ ಲೈನ್ ಟ್ರಸ್ಟ್ ಅಮ್ಮುಂಜೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಪರವಾಗಿ ಧನ್ಯವಾದ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಕಾರ್ಯನಿರ್ವಾಹಕರಾದ ಇಫಾಝ್ ಬನ್ನೂರು, ರಿಯಾಝ್ ಕಣ್ಣೂರು, ಸಾಬಿತ್ ಕುಂಬ್ರ, ನೌಶಾದ್, ರಝ್ವೀನ್ ಗುರುವಾಯನಕೆರೆ, ಇಂಝಮಾಮ್ ಕಲಾಯಿ, ರಫೀಕ್ ಕೆಮ್ಮಾಯಿ, ಜುನೈದ್ ಬಂಟ್ವಾಳ, ಅಝರ್ ಉಳಾಯಿಬೆಟ್ಟು ಹಾಗೂ ಜಿಸಿಸಿ ವರ್ಕಿಂಗ್ ಕಮಿಟಿ ಸದಸ್ಯರು, ಜಿಸಿಸಿ ಹೆಲ್ಪ್ ಲೈನ್ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.