ಬೆಳ್ತಂಗಡಿ: ಮನೆ ಕಡೆ ಸಾಗುವ ರಸ್ತೆ ವಿಚಾರದಲ್ಲಿ ಸಂಬಂಧಿಕರೇ ಹೊಡೆದಾಟ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಇಲ್ಲಿನ ನಡ ಗ್ರಾಮದ ದೇರ್ಲಕ್ಕಿಯ ಭೀಮಂಡೆ ಎಂಬಲ್ಲಿ ಪ್ರಕರಣ ವರದಿಯಾಗಿದೆ.

ಮಾರ್ಗ ದುರಸ್ತಿ ಮಾಡುವ ವಿಚಾರವಾಗಿ ನಡೆದ ಈ ಗಲಾಟೆಯಲ್ಲಿ ಕತ್ತಿ ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದು ಇತ್ತಂಡಗಳ 7 ಮಂದಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದು ಬಂದಿದೆ.
ಕಳೆದ 32 ವರ್ಷಗಳಿಂದ ಮಾರ್ಗದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಾಗದ ತಕರಾರು ಇತ್ತು.ಇದೇ ವಿಚಾರವಾಗಿ ಬೆಳಗ್ಗೆ ಓಬಯ್ಯ ಗೌಡ ಹಾಗೂ ಅವರ ಮಂದಿರಾದ ಕೃಷ್ಣಪ್ಪ ಗೌಡ, ಕೇಶವ ಗೌಡ ಹಾಗೂ ಕೃಷ್ಣಪ್ಪ ಅವರ ಪತ್ನಿ ಭವಾನಿ ಅವರು ಮನೆಗೆ ಹೋಗುವ ರಸ್ತೆಗೆ ಪಿಕಪ್‌ನಲ್ಲಿ ಚರಲು ತಂದು ಹಾಕಿ ದುರಸ್ತಿ ಮಾಡಲು ತೆರಳಿದ್ದರು.


ಈ ವೇಳೆ ಅವರ ಸಂಬಂಧಿಕರಾದ ಪೂವಪ್ಪ ಗೌಡ ಅವರ ಪತ್ನಿ ಲಲಿತ ಹಾಗೂ ಅವರ ಮಗ ವಿಜಯ ಗೌಡ ಇವರುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಲಲಿತಾ ಕಡೆಯವರು ಕತ್ತಿ ದೊಣ್ಣೆ, ಹಾರೆ, ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ.
ಈ ವೇಳೆ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು ಗಲಾಟೆಯಲ್ಲಿ ಕೃಷ್ಣಪ್ಪ ಅವರಿಗೆ ಕೈಗೆ, ಸೊಂಟಕ್ಕೆ, ಓಬಯ್ಯ ಅವರಿಗೆ ತಲೆಗೆ ಕೈ ಮತ್ತು ಬೆನ್ನಿಗೆ, ಕೇಶವ ಅವರಿಗೆ ತಲೆಗೆ,ಭವಾನಿ ಅವರಿಗೆ ತಲೆ ಹಾಗೂ ಕೈಗೆ ಗಾಯಗಳಾಗಿದೆ.
ಇನ್ನೊಂದು ತಂಡದ ಪೂವಪ್ಪ ಗೌಡ, ಲಲಿತ, ವಿಜಯ ಗೌಡ ಅವರಿಗೂ ಸಣ್ಣವುಟ್ಟ ಗಾಯಗಳಾಗಿದೆ.ಎರಡು ತಂಡದ ಗಾಯಗೊಂಡ ಏಳು ಮಂದಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡಿತಾ ಇದ್ದಾರೆ.ಈ ಬಗ್ಗೆ ಎರಡು ಕಡೆಯವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.