ಬೊಳಂತೂರು: ಬಂಟ್ವಾಳ ತಾಲೂಕಿನ ದ.ಕ.ಜಿ.ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೊಳಂತೂರು, ಇಲ್ಲಿನ 1-5 ರವರೆಗಿನ ಸರಿಸುಮಾರು 125 ಮಕ್ಕಳಿಗೆ ಬರೆಯುವ ನೋಟ್ ಪುಸ್ತಕವನ್ನು ಶಾಲೀಮರ್ ಗ್ರೂಪ್ ಚೇರ್ಮ್ಯಾನ್ ಉದ್ಯಮಿ, ಸಮಾಜಸೇವಕ ಬಶೀರ್ ಆಹ್ಮದ್ ಶಾಲೀಮಾರ್ ನೇತೃತ್ವದಲ್ಲಿ ದಿನಾಂಕ 6-6-2023 ರಂದು ಉಚಿತವಾಗಿ ವಿತರಿಸಲಾಯಿತು.
ಮುಖ್ಯ ಅತಿಥಿಗಳು ಪುಸ್ತಕ ದಾನಿಗಳಾದ ಬಶೀರ್ ಆಹ್ಮದ್ ಶಾಲೀಮಾರ್ ಮಾತಾಡಿ ಶಿಕ್ಷಣದ ಬಗ್ಗೆ ಕುರಾನ್,ಸಂಸ್ಕೃತ,ಬೈಬಲ್ ನಲ್ಲಿರುವ ಉಲ್ಲೇಖ,ಉಪದೇಶಗಳನ್ನು ಮನದಟ್ಟಾಗುವಂತೆ ವಿವರಿಸಿದರು,ಅಲ್ಲದೆ ಪೋಷಕರ,ಎಸ್.ಡಿ.ಎಂ.ಸಿ. ಸಮಿತಿಯ, ಅಧ್ಯಾಪಕರ, ಮಕ್ಕಳ ಜವಾಬ್ದಾರಿಗಳು ಮಹತ್ವದ್ದಾಗಿರುತ್ತದೆ.ಇದೆಲ್ಲವೂ ಒಂದುಗೂಡಿದರೆ ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಬೆಳವಣಿಗೆಯೊಂದಿಗೆ ಶಾಲೆಗೂ,ಊರಿಗೂ ಹೆಸರು ತಂದು ಸಾಧನೆ ಮಾಡಬಹುದೆಂದು ಉತ್ತಮವಾದ ಸಬೀಕರು ಮೆಚ್ಚುವಂತ ಉತ್ತಮ ಉಪದೇಶ ನೀಡಿದರು.
ಪ್ರಸ್ತಾವಿಕ ಬಾಷಣ ಮಾಡಿದ ದೈಹಿಕ ಶಿಕ್ಷಕರಾದ ಹರೀಶ್. ವಿ ಶಾಲೆಯ ಹಳೇ ವಿದ್ಯಾರ್ಥಿಗಳು ನೀಡುತ್ತಿರುವ ಸಹಕಾರದಿಂದಾಗಿ ಶಾಲೆಯೂ ಖಾಸಗಿ ಶಾಲೆಯ ಶೈಲಿಯ ಗುಣಮಟ್ಟವನ್ನು ಮತ್ತು ಕಲಿಕೆಯಲ್ಲಿ ಉನ್ನತಿಯನ್ನು ಗಳಿಸಲು ಸಾದ್ಯವಾಗಿದೆ ಎಂದು ತಿಳಿಸಿದರು.ಪುಸ್ತಕ ವಿತರಣೆ ಸೇರಿ ಇನ್ನಿತರ ಎಲ್ಲಾ ಪ್ರೋತ್ಸಾಹಕರ ವಿಚಾರಗಳಲ್ಲಿ ಮುಂಚೂಣಿಗರಾಗಿ ಸ್ಪಂದಿಸುವ ಈ ಶಾಲೆಯ ಹಳೆವಿದ್ಯಾರ್ಥಿ ಉಸ್ಮಾನ್ ಬಂಗಾರಕೋಡಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.ಸಮಾರಂಭದ ಅಧ್ಯಕ್ಷತೆಯನ್ನು SDMC ಅದ್ಯಕ್ಷರಾದ ಬಶೀರ್ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ದ.ಕ.ಜಿ.ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೊಳಂತೂರು ಇದರ SDMC ಅದ್ಯಕ್ಷರಾದ ಬಶೀರ್,ಮುಖ್ಯೋಪಾದ್ಯಯರಾದ ಗೀತಾ.ಎಸ್,ಮುಖ್ಯ ಆತಿಥಿ ಉದ್ಯಮಿ ಬಶೀರ್ ಆಹ್ಮದ್ ಶಾಲೀಮಾರ್,ಬೊಳಂತೂರು ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಮಹಾಲಕ್ಷ್ಮಿ, ಗ್ರಾಮ ಪಂಚಾಯತ್ ಸದಸ್ಯರಾದ ಯಾಕೂಬ್ ದಂಡೆಮಾರ್, ಸಮಾಜ ಸೇವಕರಾದ ಉಸ್ಮಾನ್.ಬಿ.,ಹಸೈನಾರ್ ತಾಳಿತ್ತನೂಜಿ, ಆಹ್ಮದ್ ಬಾವ ಕಣ್ಣೂರು,ಹಳೆವಿದ್ಯಾರ್ಥಿಗಳಾದ ಮಹಮ್ಮದ್ ಕುಡುಂಬಕೋಡಿ,ಹಮೀದ್ ಟೈಲರ್, ಸಲೀಂ.ಬಿ.ಜಿ., SDMC ಸದಸ್ಯರಾದ ಮುಸ್ತಫಾ ಬೊಳಂತೂರು ,ಪೋಷಕರು,ಅಧ್ಯಾಪಕ ವೃಂದ,ಆಡಳಿತ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.ಸಮಾರಂಭವನ್ನು ಹಸೈನಾರ್ ತಾಳಿತ್ತನೂಜಿ ಸ್ವಾಗತಿಸಿ,ಮುಖ್ಯೋಪಾಧ್ಯಾಯರಾದ ಗೀತಾ.ಎಸ್. ಧನ್ಯವಾದ ನೀಡಿದರು.ಕಾರ್ಯಕ್ರಮವನ್ನು ಶಿಕ್ಷಕಿ ವರಲಕ್ಷ್ಮಿ ನಿರೂಪಿಸಿದರು.