ಬೆಂಗಳೂರು: 50 ವರ್ಷಗಳನ್ನು ಪೂರೈಸುತ್ತಿರುವ ವಿದ್ಯಾರ್ಥಿ ಸಂಘಟನೆ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್(ಎಸ್ಸೆಸ್ಸೆಫ್)
ಇದರ ಗೋಲ್ಡನ್ ಫಿಫ್ಟಿಯ ಭಾಗವಾಗಿ ಕರ್ನಾಟಕ ರಾಜ್ಯ ಸಮ್ಮೇಳನವು ಈ ಬಾರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 10 ರಂದು ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನಾ ಸಭೆಯು ನಿನ್ನೆ ಬೆಂಗಳೂರಿನ ಶಿವಾಜಿನಗರ ದಾರುಸ್ಸಲಾಮ್ ಆಡಿಟೋರಿಯಂನಲ್ಲಿ
ನಡೆಯಿತು.


ಸ್ವಾಗತ ಸಮಿತಿ ಅಧ್ಯಕ್ಷರಾಗಿ ಜಾಫರ್ ಅಹ್ಮದ್ ನೂರಾನಿ
ಕನ್ವೀನರ್ ಆಗಿ ಶಿಹಾಬ್ ಮಡಿವಾಳ, ಫೈನಾನ್ಸ್ ಕನ್ವೀನರ್ ಆಗಿ ಹಬೀಬ್ ನೂರಾನಿ ವರ್ಕಿಂಗ್ ಚೇರ್ಮನ್ ಆಗಿ ಮುಜೀಬ್ ಸಖಾಫಿ ನೇಮಕಗೊಂಡರು.ಕೋ ಒರ್ಡಿನರ್ ಆಗಿ ಶಾಫಿ ಸಅದಿ ಮೆಜೆಸ್ಟಿಕ್, ವೈಸ್ ಚೇರ್ಮಾನ್ ಅನಸ್ ಸಿದ್ದೀಕಿ, ಅಬ್ಬಾಸ್ ನಿಝಾಮಿ, ತಾಜುದ್ದೀನ್ ಫಾಳಿಲಿ, ಲತೀಫ್ ನಯೀಮಿ, ಸಾಲಿ ಶಿವಾಜಿನಗರ, ಜೊತೆ ಕನ್ವೀನರ್‌ಗಳಾಗಿ ಇಬ್ರಾಹಿಂ ಸಖಾಫಿ ಪಯೋಟ, ಮುನೀರ್, ಹಬೀಬ್ ನಾಳ, ಶಬೀಬ್ ಹಲ್ಸೂರು, ಅಕ್ತರ್ ಹುಸೈನ್, ಶಂಶುದ್ದೀನ್ ಅಝ್ಅರಿ, ಸಿದ್ದೀಕ್, ಅಲ್ತಾಫ್ ಅಲಿ, ಫೈನಾನ್ಸ್- ಮಜೀದ್ ಮಾರತಹಲ್ಲಿ, ಸಿದ್ದೀಕ್ ಇಂದಿರಾನಗರ ಮತ್ತು 111 ಸದಸ್ಯರ ಸ್ವಾಗತ ಸಮಿತಿಯನ್ನು ರಚಿಸಲಾಯಿತು
‘ವೀ ದ ಪೀಪಲ್ ಆಫ್ ಇಂಡಿಯಾ’ ಎಂಬ ಧ್ಯೇಯ ವಾಕ್ಯದೊಂದಿಗೆ ಐತಿಹಾಸಿಕವಾಗಿ ನಡೆಯುವ ಗೋಲ್ಡನ್ 50 ಸಂಭ್ರಮ ನವೆಂಬರ್‌ನಲ್ಲಿ ಮುಂಬೈನಲ್ಲಿ ನಡೆಯುವ ರಾಷ್ಟ್ರೀಯ ವಿದ್ಯಾರ್ಥಿ ಸಮ್ಮೇಳನದೊಂದಿಗೆ ಸಮಾಪ್ತಿಯಾಗಲಿದೆ.