';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ತುಮಕೂರು: ಮೇಕೆಗೆ ಸೊಪ್ಪು ತರಲು ಹೋಗಿದ್ದ ಅಣ್ಣ ಮತ್ತು ತಮ್ಮ ನೀರುಪಾಲಾಗಿರುವಂತ ಹೃದಯವಿದ್ರಾವಕ ಘಟನೆ ಜಿಲ್ಲೆಯ ಶಿರಾ ತಾಲೂಕಿನ ದ್ವಾರನಕುಂಟೆಯಲ್ಲಿ ಘಟನೆ ನಡೆದಿದೆ.
ದ್ವಾರನಕುಂಟೆ ಗ್ರಾಮದ ಸತೀಶ್(25), ಪ್ರಸನ್ನ(29) ಮೃತರು.
ಬಾವಿ ದಡದಲ್ಲಿ ಸೊಪ್ಪು ಕೊಯ್ಯುವಾಗ ಪ್ರಸನ್ನ ಆಯತಪ್ಪಿ ಬಾವಿಗೆ ಜಾರಿಬಿದ್ದಿದ್ದಾರೆ. ಆತನನ್ನು ರಕ್ಷಿಸಲು ಬಾವಿಗೆ ಇಳಿದ ತಮ್ಮ ಸತೀಶ್ ಕೂಡ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಪಟ್ಟನಾಯಕನಹಳ್ಳಿ ಪಿಎಸ್ಐ ಭುವಿತಾ ಭೇಟಿ ನೀಡಿದ್ದು, ಅಗ್ನಿಶಾಮಕದಳ ಸಿಬ್ಬಂದಿಯಿಂದ ಶವ ಮೇಲೆತ್ತಲು ಕಾರ್ಯಾಚರಣೆ ಆರಂಭಿಸಲಾಗಿದೆ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.