ಪುತ್ತೂರು: ಅನಾರೋಗ್ಯದಿಂದಿದ್ದ ಮೆಸ್ಕಾಂ ಪವರ್ಮ್ಯಾನ್ ಮನೆಯೊಳಗೆ ಕುಸಿದು ಬಿದ್ದು ಗಾಯಗೊಂಡು ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಮೃತರ ಮನೆಗೆ ಪುತ್ತೂರು ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಕುರಿಯ ಗ್ರಾಮದ ಇಡಬೆಟ್ಟು ಕುಂಡಕೋರಿ ನಿವಾಸಿ ಕುಂಡ ಮೇರ ಎಂಬವರ ಪುತ್ರ ಕುಂಬ್ರದಲ್ಲಿ ಮೆಸ್ಕಾಂ ಪವರ್ಮ್ಯಾನ್ ಆಗಿ ಕರ್ತವ್ಯದಲ್ಲಿರುವ ಉಮೇಶ್ ಕುಂಡಕೋರಿ (೪೨) ರವರು ಕೆಲದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದು ಜೂ. ೧೨ ರಂದು ರಾತ್ರಿ ಮನೆಯೊಳಗೆ ಕುಸಿದು ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆಯ ವಿಷಯ ತಿಳಿದು ಮೃತರ ಮನೆಗೆ ಭೇಟಿ ನೀಡಿದ ಶಾಸಕರು ಕುಟುಂಬಕ್ಕೆ ಸಾಂತ್ವನ ಹೇಳಿದ್ದು ಕುಟುಂಬದ ಆಧಾರವಾಗಿದ್ದ ಉಮೇಶ್ ರವರ ಸಾವಿನಿಂದ ಕುಟುಂಬ ಕಂಗಲಾಗಿದ್ದು ಮಾನವೀಯ ನೆಲೆಯಲ್ಲಿ ಪುತ್ರನಿಗೆ ಮೆಸ್ಕಾಂ ನಲ್ಲಿ ಉದ್ಯೋಗ ಕೊಡಿಸುವಲ್ಲಿ ಅವಕಾಶಗಳಿದ್ದಲ್ಲಿ ಕೆಲಸ ಕೊಡಿಸುವುದಾಗಿ ಶಾಸಕರು ಕುಟುಂಬಕ್ಕೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಶಿವರಾಮ ಆಳ್ವ, ಸನತ್ ಕುರಿಯ, ನೇಮಾಕ್ಷ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.