dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪುತ್ತೂರು, ರೋಟರಿ ಕ್ಯಾಂಪ್ಕೊ ರಕ್ತ ನಿಧಿ ಪುತ್ತೂರು ಸಹಯೋಗದಲ್ಲಿ ಜಾಗತಿಕ ರಕ್ತದಾನಿಗಳ ದಿನದ ಪ್ರಯುಕ್ತ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ನಾಳೆ(ದಿ.14-06-2023) ರೋಟರಿ ಕ್ಯಾಂಪ್ಕೊ ರಕ್ತ ನಿಧಿ ಪುತ್ತೂರಿನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸಂತೋಷ್ ಶೆಟ್ಟಿ ವಹಿಸಲಿದ್ದಾರೆೆ. ಸರ್ವ ಧರ್ಮಗುರುಗಳ ದಿವ್ಯ ಹಸ್ತದಿಂದ ಉದ್ಘಾಟನೆ ಕಾರ್ಯಕ್ರಮ ನೆರೆವೇರಲಿದೆ.

'; } else { echo "Sorry! You are Blocked from seeing the Ads"; } ?>

ಮುಖ್ಯ ಅತಿಥಿಗಳಾಗಿ ಇಬ್ರಾಹಿ ಸಾಗರ್, ಕಾವು ಹೇಮನಾಥ್ ಶೆಟ್ಟಿ, ಅಶ್ರಫ್ ಕಲ್ಲೇಗ, ಪ್ರಶಾಂತ್ ಶೆಟ್ಟಿ, ರಂಜೀತ್ ಬಂಗೇರ, ಶ್ರೀ ಪ್ರಸಾದ್ ಪಾಣಾಜೆ, ಅಲಿ ಪರ್ಲಡ್ಕ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಬೆಳಗ್ಗೆ ಗಂಟೆ 9:30 ರಿಂದ ಮಧ್ಯಾಹ್ನ ಗಂಟೆ 1:30 ರವರೆಗೆ ನಡೆಯುವ ಈ ಶಿಬಿರದಲ್ಲಿ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡಿ ಜೀವದಾನಿಗಳಾಗಿ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!