dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ನುಡಿದಂತೆ ನಡೆದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸರಕಾರದ ನಡೆಗೆ ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರಕಾರದಲ್ಲಿ ಹತ್ಯೆಯಾದಾಗ ಧರ್ಮದ ಆಧಾರದಲ್ಲಿ ರಾಜ್ಯದ ಪ್ರಜೆಗಳನ್ನು ವಿವಿಧ ಆಯಾಮಗಳಲ್ಲಿ ವಿಭಜಿಸಿ ಹಿಂದು,ಮುಸ್ಲಿಂ ಭೇದ ಭಾವ ಮಾಡಿ ಸಮಾಜವನ್ನು ವಿಭಜಿಸಿ ಬಿಜೆಪಿ ಹಾಗು ಬಲಪಂತೀಯ ಸಂಘಟನೆಗಳು ಪುನಃ ಅಧಿಕಾರಕ್ಕೆ ಬರಬಹುದೆಂದು ಭಾವಿಸಿ ಕೋಮುವಾದಕ್ಕೆ ತುಪ್ಪ ಸುರಿದರು ಆದರೆ ರಾಜ್ಯದ ಜನತೆ ಸಾರಸಗಟಾಗಿ ಅವರನ್ನು ಸೋಲಿಸುವ ಮೂಲಕ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಎಂದು ಎತ್ತಿತೋರಿಸಿದೆ.

'; } else { echo "Sorry! You are Blocked from seeing the Ads"; } ?>

ಕೊಲೆಗೀಡಾದ 4 ಆತ್ಮಗಳಿಗೆ ಅಗೌರವ ಮಾಡಿದ ಸರಕಾರವನ್ನು ಕಿತ್ತೆಸೆದರು, ಕೊಲೆಗೀಡಾದ ಮುಸಲ್ಮಾನರನ್ನು ತುಚ್ಚವಾಗಿ ಕಂಡ ಅಂದಿನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿಜೆಪಿ ಸಚಿವರು ಕೆಲವು ಪೊಲೀಸ್ ಅಧಿಕಾರಿಗಳು ಜಿಲ್ಲೆಯ ಕೆಲವು ಅಧಿಕಾರಿಗಳು ಸೌಜನ್ಯಕ್ಕೆ ಮೃತರ ಮನೆಗೆ ಭೇಟಿ ನೀಡಿ ಸಹನಭೂತಿ ಸಂತಾಪ ತಿಳಿಸಿಲ್ಲ ಆ ನೋವು ಮರೆ ಯಲು ಸಾಧ್ಯವಿಲ್ಲ ಆದರೆ ಸಿದ್ದರಾಮಯ್ಯ ಸರಕಾರ ಇಂದು ತಲಾ 25 ಲಕ್ಷ ನೀಡುವ ನಿರ್ಧಾರ ಅವರ ಮೃತರ ಆತ್ಮಕ್ಕೆ ಹಾಗು ಮಾನವ ಸಮುದಾಯಕ್ಕೆ ಗೌರವ ತರುವ ಕೆಲಸವನ್ನು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಡಿ ಕೆ ಶಿವಕುಮಾರ್, ಸರಕಾರವನ್ನು ಕೆಪಿಸಿಸಿ ಕಾರ್ಯದರ್ಶಿ ಹಾಗು ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಅಭಿನಂದಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!