ಕೊಕ್ಕಡ: ಮಳೆಗಾಲ ಶುರುವಾಗುತ್ತಿದ್ದಂತೆ ಕಾಡಿನಲ್ಲಿರಬೇಕಾದ ಪ್ರಾಣಿಗಳು,ಹಾವುಗಳು ತಮ್ಮ ರಕ್ಷಣೆಗಾಗಿ ನಾಡಿನತ್ತ ಮುಖಮಾಡುವುದು ಸಹಜ ಅನ್ನಬಹುದು. ಇದೀಗ ಕೊಕ್ಕಡ ಭಾಗದಲ್ಲಿ ಮನೆಯೊಂದರಲ್ಲಿ ಕಾಳಿಂಗ ಸರ್ಪವೊಂದು ಕಂಡುಬಂದಿದ್ದು ಮನೆಯವರ ಮತ್ತು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಸರಿಸುಮಾರು ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪ ಮನೆಯ ಹಿಂಭಾಗದಲ್ಲಿ ಕಂಡು ಬಂದಿದ್ದು ಆತಂಕಗೊಂಡ ಮನೆಯವರು ನಾಗರಿಕರಿಗೆ ತಿಳಿಸಿದ್ದಾರೆ.ಕೂಡಲೇ ಸ್ನೇಕ್ ಮಾಸ್ಟರ್ ಪ್ರಕಾಶ್ ಧರ್ಮಸ್ಥಳ ಮತ್ತು ತಂಡದವರು ಧಾವಿಸಿ ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಈ ಸಂದರ್ಭದಲ್ಲಿ ಹಲವು ಸಾಮಾಜಿಕ ಕಾರ್ಯಕರ್ತರು ಮತ್ತು ಊರ ನಾಗರಿಕರು ಮನೆ ಕಡೆ ಧಾವಿಸಿದ್ದಾರೆ.
ಕೊಕ್ಕಡದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯಿರುವ ಚೇತನ್ ಎಲ್.ಟಿ ಹಾಗೂ ಸಚಿನ್ ಎಂಬವರು ಮನೆಯಲ್ಲಿ ಹಾವು ಪ್ರತ್ಯಕ್ಷವಾಗಿದ್ದು ಯಾವುದೇ ಅಡೆತಡೆಯಿಲ್ಲದೆ ಹಾವನ್ನು ಹಿಡಿಯುವಲ್ಲಿ ಸ್ನೇಕ್ ಮಾಸ್ಟರ್ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿಯುವ ರೋಮಾಂಚನಕಾರಿ ದೃಶ್ಯ ಸೇರೆಯಾಗಿದ್ದು ಕೆಳಗೆ ನೀಡಲಾಗಿದೆ👇🏻👇🏻