ಕುಂಬ್ರ: ಕಳೆದ ಮೂರು ದಿನಗಳ ಹಿಂದೆ ಕುಂಬ್ರದ ಉರ್ವ ಎಂಬಲ್ಲಿ ಕಿಡ್ನಿ ವೈಫಲ್ಯಕ್ಕೊಳಗಾಗಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಯುವಕ ಸುನಿಲ್ ಎಂದು ತಿಳಿದು ಬಂದಿದ್ದು ಕಳೆದ 3 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರೆಂದು ತಿಳಿದು ಬಂದಿದೆ.
ಮೃತಪಟ್ಟ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಸಾಂತ್ವನ ನೀಡಿದ್ದಾರೆ.ಈ ಸಂದರ್ಭದಲ್ಲಿ ಪುತ್ತೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಎಂಬಿ.ವಿಶ್ವನಾಥ್ ರೈ, ಒಳಮೊಗ್ರು ಕಾಂಗ್ರೆಸ್ ವಲಯಾಧ್ಯಕ್ಷ ಅಶೋಕ್ ಪೂಜಾರಿ,ಪಂಚಾಯತ್ ಸದಸ್ಯ ಶೀನಪ್ಪ ನಾಯ್ಕ, ವಲಯ ಉಪಾಧ್ಯಕ್ಷ ಬೊಳ್ಳಾಡಿ ಮುಹಮ್ಮದ್, ರಕ್ಷಿತ್ ರೈ ಮುಗೇರು, ಆಬೀದ್ ಕಣ್ಣೂರು, ಸಿದ್ದೀಕ್ ಸುಲ್ತಾನ್, ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಉರ್ವದಲ್ಲಿ ಮರಣ ಹೊಂದಿದ ಮರಿಯಮ್ಮ- ಕಳೆದ ಚುನಾವಣೆಯಲ್ಲಿ ಕುಂಬ್ರ ಒಳಮೊಗ್ರು ಬೂತಿನಲ್ಲಿ ಆಂಬ್ಯುಲೆನ್ಸ್ ನಲ್ಲಿ ಬಂದು ತನ್ನ ಹಕ್ಕನ್ನು ಚಲಾಯಿಸಿ ಎಲ್ಲರಿಗೂ ಮಾದರಿಯಾಗಿ ವೈರಲ್ ಆಗಿದ್ದು ಸುಲೈಮಾನ್ರವರ ತಾಯಿ 74 ವರ್ಷದ ಮರಿಯಮ್ಮ ಇಂದು ಮರಣ ಹೊಂದಿದ್ದು ಈ ಸಂದರ್ಭದಲ್ಲಿ ಮರಣದ ಮನೆಗೂ ಭೇಟಿ ನೀಡಿ ಇದೇ ತಂಡ ಮೌನ ಪ್ರಾರ್ಥನೆಯ ಮೂಲಕ ಮೃತದೇಹಕ್ಕೆ ಗೌರವ ಅರ್ಪಿಸಿದರು.