ಉಡುಪಿ: ಸಂಘ ಸಂಸ್ಥೆಗಳು ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಕಾರ್ಯಗತ ಗೊಳಿಸದೇ ಇದ್ದಲ್ಲಿ ಮತ್ತೆ ಆ ಸಂಘಟನೆ ಮುನ್ನಡೆಯನ್ನು ಸಾಧಿಸಲು ಕಷ್ಟ ಸಾಧ್ಯ ಎಂದು ಭಾರತೀಯ ಜನತಾ ಪಾರ್ಟಿಯ ಬೈಂದೂರು ಮಂಡಲ ಅದ್ಯಕ್ಷಾದ ದೀಪಕ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಇಂದು ಬುಖಾರಿ ಫ್ರೆಂಡ್ಸ್ ಶಿರೂರು ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ಇದರ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ರಕ್ತ ನಿಧಿ ಕುಂದಾಪುರ ಇವರ ಸಹಯೋಗದೊಂದಿಗೆ ಬಕ್ರೀದ್ ಹಬ್ಬದ ಪ್ರಯುಕ್ತ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ ) ಸಂಸ್ಥೆಯ 172ನೇ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಶಿರೂರು ಜಂಕ್ಷನ್ ನಲ್ಲಿ ಉದ್ಘಾಟಿಸಿ ಮಾತಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಇಲ್ಯಾಸ್ ಅಲ್ರುಬಾನ್ ಮಾತಾಡಿ ರಕ್ತದಾನಿಗಳು ಇನ್ನೊಂದು ಜೀವಕ್ಕೆ ಮಿಡಿಯುವ ಹೃದಯವಂತರು ಆ ಕಾರಣದಿಂದಾಗಿ ಅವರು ಶ್ರೇಷ್ಠರು ಎಂದು ಶಿಬಿರಕ್ಕೆಶುಭ ಹಾರೈಸಿದರು.ವೇದಿಕೆಯಲ್ಲಿ ಕೈಫ್ ಝಿಹಾವುಲ್ ಹಕ್, ವೀರೇಂದ್ರ ಉಪಸ್ಥಿತರಿದ್ದರು.
ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಮುಖ್ಯ ಸಲಹೆಗಾರರಾದ ಫಯಾಝ್ ಅಲಿ ಬೈಂದೂರು ಸ್ವಾಗತಿಸಿದರು.
ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಕಾರ್ಯನಿರ್ವಾಹಕ ಮುಬೀನ್ ವಂದಿಸಿದರು.