ಮಂಗಳೂರು: ಡಿ.ಕೆ.ಎಸ್.ಸಿ. ಪಡುಬಿದ್ರಿ ಘಟಕದ ಪ್ರಥಮ ವಾರ್ಷಿಕ ಮಹಾಸಭೆಯು ಶುಕ್ರವಾರ ಉರ್ದು ಶಾಲೆ ಪಡುಬಿದ್ರಿಯಲ್ಲಿ ಅಸರ್ ನಮಾಝಿನ ಬಳಿಕ ಬಹಳ ಯಶಸ್ವಿಯಾಗಿ ನೆರವೇರಿತು.ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಎ.ಎಚ್.ಅಬ್ದುಲ್ ಖಾದರ್ ವಹಿಸಿದ್ದರು. ಮಾರ್ಕಝ್ ಸಮಿತಿಯ ವ್ಯವಸ್ಥಾಪಕರಾದ ಯು.ಕೆ.ಮುಸ್ತಫಾ ಸಅದಿ ದುವಾದ ಮೂಲಕ ಸಭೆಗೆ ಚಾಲನೆ ನೀಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಡಿ. ಕೆ. ಎಸ್. ಸಿ. ಸದಸ್ಯತ್ವವನ್ನು ಪಡೆದರೆ ನಮಗಾಗುವ ಲಾಭ ಮತ್ತು ಸಂಘಟನೆ ನಡೆದು ಬಂದ ದಾರಿಯನ್ನು ವಿವರಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕೌಸರ್ ರವರು ವಾರ್ಷಿಕ ವರದಿ ವಾಚನ ಮತ್ತು ಲೆಕ್ಕ ಪತ್ರವನ್ನು ಮಂಡಿಸಿ ಸಭೆಯ ಅಂಗೀಕಾರವನ್ನು ಪಡೆದರು. ಡಿ.ಕೆ.ಎಸ್.ಸಿ. ಸ್ಥಾಪಕ ಸದಸ್ಯರೂ ಸ್ಥಾಪಕ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಅಬ್ದುಲ್ ರಹ್ಮಾನ್ ಹಾಜಿ ಮಣಿಪಾಲ್ ರವರ ನೇತೃತ್ವದಲ್ಲಿ ನೂತನ ಸಮಿತಿಯು ರಚಣೆಯಾಯಿತು.
ಅಧ್ಯಕ್ಷರಾಗಿ ಎ.ಎಚ್ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಕೌಸರ್, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಬಹುಮತದೊಂದಿಗೆ ಮರು ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಪಿ. ಎ. ರಹ್ಮಾನ್ ಹಾಜಿ, ಹಸನ್ ಕಂಚಿನಡ್ಕ, ಪಿ. ಎ. ಮುಹಿಯ್ಯುದ್ದೀನ್, ಜೊತೆ ಕಾರ್ಯದರ್ಶಿಗಳಾಗಿ ಫಿರೋಝ್, ಪಿ. ಎಂ. ಅಬ್ದುಲ್ ಹಮೀದ್, ಆರ್ಗನೈಝರ್(ಸಂಘಟಕ)ರಾಗಿ ಆಪತ್ಭಾಂದವ ಮುಹಮ್ಮದ್ ಆಸೀಫ್ ಪಡುಬಿದ್ರಿ, ಸಲಹೆಗಾರರಾಗಿ ಅಕ್ಬರ್, ಅಹ್ಮದ್ ಟೈಲರ್, ಹಸನ್ ಕಾಡಿಪಟ್ನ, ಮುಹಮ್ಮದ್ ಅಶ್ರಫ್ ಆಯ್ಕೆಯಾದರು. ಸದಸ್ಯರುಗಳಾಗಿ, ಅಬ್ದುಲ್ ಬಷೀರ್, ಇಬ್ರಾಹಿಂ, ಎಸ್. ಪಿ. ಅಬ್ದುಲ್ ಖಾದರ್, ನಝೀರ್, ಇಸ್ಮಾಯಿಲ್ ಕಂಚಿನಡ್ಕ, ಶೇಕಬ್ಬಾ, ಝಹೀರ್, ಎಂ. ಎಚ್. ಅಮ್ಮಬ್ಬ ಹಾಜಿ, ಇಲ್ಯಾಸ್. ಮುಂತಾದವರು ಆಯ್ಕೆಯಾದರು. ಬಿ. ಎಸ್. ಎಫ್. ಅಸಿಸ್ಟೆಂಟ್ ಕಮಾಂಡೆಂಟ್ ಪಿ. ಎ. ಮುಹಿಯ್ಯುದ್ದೀನ್ ಪಡುಬಿದ್ರಿ ಯವರಿಗೆ ಗೌರವ ಸನ್ಮಾನ ಏರ್ಪಡಿಸಲಾಯಿತು.ಘಟಕದ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದರು. ಡಿ. ಕೆ. ಎಸ್. ಸಿ. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ಕಾರ್ಯಕ್ರಮ ನಿರೂಪಿಸಿದರು.ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಧನ್ಯವಾದಗೈದು ಮೂರು ಸಲಾತಿನೊಂದಿಗೆ ಸಭೆಯು ಮುಕ್ತಾಯವಾಯಿತು.