dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ನಮ್ಮ ಮಗುವಿಗೆ ಆರೋಗ್ಯ ಸರಿಯಿಲ್ಲ, ಈಗಾಗಲೇ ಚಿಕಿತ್ಸೆಗೆ ಲಕ್ಷಾಂತರ ರೂ ಖರ್ಚು ಮಾಡಿದ್ದೇನೆ, ಇನ್ನು ನನ್ನಲ್ಲಿ ಚಿಕಿತ್ಸೆಗೆ ಹಣವಿಲ್ಲ ನನಗೆ ದಿಕ್ಕೇ ತೋಚದಂತಾಗಿದೆ ನನ್ನ ಮಗುವನ್ನು ಬದುಕಿಸಿ. ನಾನು ಬಿಜೆಪಿಗ ನಾನು ನಿಮಗೆ ವೋಟು ಹಾಕಿಲ್ಲ, ವೋಟು ಹಾಕದೆ ತಪ್ಪು ಮಾಡಿದೆ ದಯವಿಟ್ಟು ನನ್ನ ಮಗುವನ್ನು ಕಾಪಾಡಿ ಎಂದು ಹೇಳಿ ಬಿಜೆಪಿ ಕಾರ್ಯಕರ್ತನೋರ್ವ ನನಗೆ ಕರೆ ಮಾಡಿದ್ದು ಈ ವಿಚಾರವನ್ನು ಶಾಸಕರು ಕುರಿಯದಲ್ಲಿ ನಡೆದ ಕುರಿಯ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ.

ನನಗೆ ವೋಟು ಹಾಕಿದವನಿಗೂ ವೋಟು ಹಾಕದವನಿಗೂ, ಬಿಜೆಪಿಯವರಿಗೂ, ಬ್ಯಾಟ್‌ನವರಿಗೂ ಎಲ್ಲರಿಗೂ ನಾನೇ ಶಾಸಕ ನಾನು ಗೆದ್ದ ಮೇಲೆ ಎಲ್ಲರ ಶಾಸಕನಾಗಿದ್ದೇನೆ. ಕ್ಷೇತ್ರದಲ್ಲಿ ನೊಂದವರಿಗೆ ಸಹಾಯ ಮಾಡುವುದು ನನ್ನ ಧರ್ಮ. ಶಾಸಕಾನದ ನಾನು ರಾಜಧರ್ಮ ಪಾಲನೆ ಮಾಡುವವನಾಗಿದ್ದೇನೆ. ಬಿಜೆಪಿಗೆ ವೋಟು ಹಾಕಿದ್ದಾರೆ ಎಂದು ಸಹಾಯ ಕೇಳಿ ಬಂದವರಿಗೆ ನಾನು ಸಹಾಯ ಮಾಡದೇ ಇರುವುದು ಧರ್ಮವಲ್ಲ ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಜನರ ಜೊತೆ ಪ್ರೀತಿಯನ್ನು ತೋರಬೇಕು. ರಾಜಧರ್ಮ ಪಾಲನೆ ಮಾಡದೇ ಇರುವುದು ಕಾಂಗ್ರೆಸ್‌ನ ಸಂಸ್ಕೃತಿಯಲ್ಲ ಹಾಗೆ ಮಾಡುವುದು ನಮ್ಮ ವಿರೋಧ ಪಕ್ಷದವರ ಜಾಯಾಮಾನವಾಗಿರಬಹುದು.

ಯಾವುದೇ ಪಕ್ಷದ ಕಾರ್ಯಕರ್ತರು ನಿಮ್ಮ ಬಳಿ ಸಹಾಯ ಕೇಳಿ ಬಂದರೆ ಜಾತಿ, ಧರ್ಮ , ಪಕ್ಷ ನೋಡದೆ ಸಹಾಯ ಮಾಡಿ ಅವರು ಅದನ್ನು ಮರೆಯುವುದಿಲ್ಲ. ಸಹಾಯ ಪಡೆದವರು ನಮ್ಮ ಜೊತೆ ಇರುವಂತೆ ನೋಡಿಕೊಳ್ಳಿ ಎಂದು ಶಾಸಕರು ಕಾರ್ಯಕರ್ತರಿಗೆ ಸೂಚಿಸಿದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!