';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಂಟ್ವಾಳ: ಮನೆಯ ಮೇಲೆ ಗುಡ್ಡ ಕುಸಿದು ಮಹಿಳೆಯೋರ್ವರು ಮೃತಪಟ್ಟ ಘಟನೆ ಸಜಿಪಮುನ್ನೂರು ಸಮೀಪದ ನಂದಾವರದಲ್ಲಿ ನಡೆದಿದೆ.ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ನಂದಾವರ ನಿವಾಸಿ ಮುಹಮ್ಮದ್ ರವರ ಪತ್ನಿ ಝರೀನಾ (47) ಎಂದು ಗುರುತಿಸಲಾಗಿದೆ.
ಕಳೆದ ಒಂದು ವಾರಗಳಿಂದ ಜಿಲ್ಲೆಯಲ್ಲಿ ಬೀಸುತ್ತಿರುವ ಭೀಕರ ಮಳೆಗೆ ಮನೆಯ ಹಿಂಬದಿಯ ಗುಡ್ಡ ಜರಿದು ಝರೀನಾ ರವರ ಮನೆ ಮೇಲೆ ಬಿದ್ದಿದ್ದು ಮನೆಯೊಳಗಿದ್ದ ತಾಯಿ ಮತ್ತು ಮಗಳು ಶಫಾ(20) ರವರ ಮೇಲೇಯೂ ಗುಡ್ಡ ಜರಿದು ಬಿದ್ದಿದ್ದು ಇಬ್ಬರು ಮಣ್ಣಿನಡಿಗೆ ಸಿಲುಕಿದ್ದರು.ಅವರಲ್ಲಿ ಶಫಾ ರವರನ್ನು ತಕ್ಷಣವೇ ರಕ್ಷಣೆ ಮಾಡಿ ಹೊರ ತೆಗೆಯಲಾಗಿದ್ದು.ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಝರೀನಾ ರವರನ್ನು ಹೊರ ತೆಗಿಯುವ ವೇಳೆ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.ಸ್ಥಳೀಯರು ಮತ್ತು ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯ ಆಡಳಿತ ಅಧಿಕಾರಿಗಳು, ತಹಸೀಲ್ದಾರರು ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡರು.