';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ಹೃದಯಾಘಾತಕ್ಕೊಳಗಾಗಿ ಪೆರ್ನೆಯ ಯುವಕನೋರ್ವ ಪಲ್ಲತ್ತಾರುನಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ.ಮೃತಪಟ್ಟ ದುರ್ದೈವಿಯನ್ನು ಉಪ್ಪಿನಂಗಡಿ ಸಮೀಪದ ಪೆರ್ನೆ ನಿವಾಸಿ ಸಿದ್ದೀಕ್(29) ಎಂದು ಗುರುತಿಸಲಾಗಿದೆ.
ಕೆಲಸದ ಹಿನ್ನಲೆ ಪಲ್ಲತ್ತಾರುನಲ್ಲಿದ್ದ ಸಿದ್ದೀಕ್ ಆರೋಗ್ಯಪೂರ್ಣವಾಗಿಯೇ ಇದ್ದಿದ್ದು ರಾತ್ರಿ ಮಲಗಿದ ಯುವಕ ಬೆಳಗ್ಗೆ ಏಳದೇ ಇರುವಾಗ ಹೋಗಿ ಎಚ್ಚರಿಸಿದಾಗ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಸಿದ್ದೀಕ್ ಸಜ್ಜನ ವ್ಯಕ್ತಿಯಾಗಿದ್ದು ಹಲವಾರು ಸಾಮಾಜಿಕ ಜೀವ ಕಾರುಣ್ಯ ಕಾರ್ಯಗಳಲ್ಲಿ ತೊಡಗಿಸಿಕೊಂಡವರಾಗಿದ್ದಾರೆ.
ಸುನ್ನೀ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಸಿದ್ದೀಕ್ SSF ಉಪ್ಪಿನಂಗಡಿ ಡಿವಿಷನ್ ಸಮಿತಿಯ ರೀಡ್ ಪ್ಲಸ್ ಕಾರ್ಯದರ್ಶಿಯಾಗಿ ಸೇವೆಗೈಯುತ್ತಿದ್ದರು.
ಸಕ್ರಿಯ ಕಾರ್ಯಕರ್ತನ ಕಳೆದುಕೊಂಡ SSF ಉಪ್ಪಿನಂಗಡಿ ಡಿವಿಷನ್ ಸಮಿತಿ ಸಹೋದರ ಅಗಲುವಿಕೆಗೆ ತೀವ್ರ ಸಂತಾಪ ಸೂಚಿಸಿದೆ.ಮೃತರು ಪತ್ನಿ ಮೂರು ಕಂದಮ್ಮ ಗಳನ್ನು ಅಗಲಿದ್ದಾರೆ.