ಪುತ್ತೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಹುನ್ನಾರ ನಡೆಸುತ್ತಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ವಿರುದ್ಧ ಪುತ್ತೂರು,ವಿಟ್ಲ,ಉಪ್ಪಿನಂಗಡಿ ಕಡೆಯ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಪುತ್ತೂರು ಗಾಂಧಿ ಕಟ್ಟೆ ಎದುರು ಕಪ್ಪು ಬಟ್ಟೆ ಕಟ್ಟಿಕೊಂಡು ಒಂದು ದಿನದ ಮೌನ ಪ್ರತಿಭಟನೆ ಇಂದು ಬೆಳಗ್ಗಿನಿಂದಲೇ ಆರಂಭಗೊಂಡಿದೆ.





ಕಾಂಗ್ರೆಸಿನ ನಾಯಕರು ಸದಸ್ಯರು ಮುಂತಾದವರೆಲ್ಲ ಸೇರಿಕೊಂಡು ತಮ್ಮ ನಾಯಕನಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಬ್ಲಾಕ್ ಕಾಂಗ್ರೆಸಿನ ಮಾಜಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ,ರವಿ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ,ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್, ಒಳಮೊಗ್ರು ವಲಾಯಧ್ಯಕ್ಷ ಅಶೋಕ್ ಪೂಜಾರಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಮಹಾಲಿಂಗ ನಾಯ್ಕ, ಅಮಲ ರಾಮಚಂದ್ರ, ಸಿದ್ದೀಕ್ ಸುಲ್ತಾನ್, ಎಕೆ.ಮೇರ್ಲಾ ಕೆಯ್ಯೂರು,ಸಂತೋಷ್ ಭಂಡಾರಿ ಚಿಲ್ಮೆತ್ತಾರ್,ಹಾರಿಸ್ ಸಂಟ್ಯಾರ್,ಸಹರ ಅಡ್ವೊಕೇಟ್ ಇನ್ನೂ ಹಲವು ನಾಯಕರು ಮುಂತಾದವರು ಉಪಸ್ಥಿತರಿದ್ದರು.