ಕೇರಳ: ಹಿರಿಯ ಕಾಂಗ್ರೇಸ್ ಮುಖಂಡ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಜ್ಜನ ರಾಜಕಾರಣಿ ಕೇರಳ ರಾಜ್ಯದ ಮಾಜಿ ಮುಖ್ಯ ಮಂತ್ರಿ ಉಮ್ಮನ್ ಚಾಂಡಿ ನಿಧನಕ್ಕೆ ಕೆ.ಪಿ.ಸಿ.ಸಿ ಮುಖ್ಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಗಡಿನಾಡ ಕರ್ನಾಟಕದ ಅಭಿವೃದ್ದಿಯ ಹರಿಕಾರರಾಗಿ, ಕರ್ನಾಟಕದ ಗಡಿ ಪ್ರದೇಶದ ಸ್ಥಳಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸು ಸಂಚಾರಗಳನ್ನು ಗ್ರಾಮೀಣ ಪ್ರದೇಶದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಪಕ್ಷಕ್ಕಾಗಿ ನಿರಂತರ ಹೋರಾಟವನ್ನು ನಡೆಸುತ್ತಿದ್ದರು. ಪುದುಪಳ್ಳಿಯಲ್ಲಿ ಒಂದೇ ಕ್ಷೇತ್ರದಲ್ಲಿ 53 ವರ್ಷಗಳ ಕಾಲ ಶಾಸಕರಾಗಿ ಎರಡು ಬಾರಿ ಮುಖ್ಯಮಂತ್ರಿಯಾಗಿ, ಎರಡು ಬಾರಿ ವಿರೋಧಪಕ್ಷದ ನಾಯಕರಾಗಿ ರಾಜ್ಯದ ಗೃಹ ಆರ್ಥಿಕ ಸಚಿವರಾಗಿ ರಾಜ್ಯ ಕೆ ಎಸ್ ಯು (ವಿದ್ಯಾರ್ಥಿ ಕಾಂಗ್ರೆಸ್ಸ್) ಮತ್ತು ಯುವಕ ಕಾಂಗ್ರೆಸ್ಸ್ ರಾಜ್ಯ ಅಧ್ಯಕ್ಷರಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸಾಮಾನ್ಯ ಜನರ ಮದ್ಯ ದಿವಸದ 20 ಘಂಟೆ ದುಡಿದ ಹಿರಿಯ ಕಾಂಗ್ರೇಸ್ ನಾಯಕರಾಗಿರುವ ಇವರ ಅಕಾಲಿಕ ನಿಧನವು ಕಾಂಗ್ರೇಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.
ಪಕ್ಷದಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದರು. ಇವರ ನಿಧನಕ್ಕೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುತ್ತಾ ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಮತ್ತು ಅವರ ಕುಟುಂಬದವರಿಗೆ ದು:ಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಟಿ.ಎಂ ಶಹೀದ್ ತೆಕ್ಕಿಲ್ ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.