ಉಡುಪಿ: ಅನಾರೋಗ್ಯ ಹಿನ್ನಲೆ ತನ್ನೆರೆಡು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕಾರ್ಕಳ ನಿವಾಸಿ ಸನಾ(21) ಹೃದಯಾಘಾತ ದಿಂದ ಮೃತಪಟ್ಟ ಘಟನೆ ನಿನ್ನೆ ಸಂಭವಿಸಿದೆ.
ತನ್ನೆರೆಡು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸನಾಳ ಚಿಕಿತ್ಸೆಗಾಗಿ ಕಳೆದ ಎರಡು ದಿನಗಳ ಮುಂಚೆ ಸಮಾಜಿಕ ಜಾಲತಾಣಗಳಲ್ಲಿ ತನ್ನ ಅನಾರೋಗ್ಯದ ವಿಡಿಯೋ ಹರಿಯಬಿಡುವುದರ ಮೂಲಕ ತನ್ನ ಸಂಕ್ಷಟಕ್ಕೆ ನೆರವಾಗಲು ಸನಾ ದಾನಿಗಳ ಮುಂದೆ ಬಂದಿದ್ದಳು ಅದರಂತೆ ಅವಳಿಗೆ ಅವಳ ಚಿಕಿತ್ಸೆಗೆ ಒಂದೇ ದಿನದಲ್ಲಿ ಸರಿ ಸುಮಾರು 23 ಲಕ್ಷಕ್ಕೂ ಮಿಕ್ಕ ಹಣಗಳು ಅವಳ ಖಾತೆ ಗೆ ಜಮಾ ಆಗಿತ್ತು.ಆ ನಿಟ್ಟಿನಲ್ಲಿ ಇದೇ ವಾರದಲ್ಲಿ ಸನಾಳ ಕಿಡ್ನಿ ಮರುಜೋಡಣೆ ಪ್ರಕ್ರಿಯೆ ಈ ವಾರದಲ್ಲೇ ನಡೆಯಬೇಕಿತ್ತು.
ತಾಯಿಗೆ ತೈರಾಯಿಡ್ ಇರುವುದರಿಂದ ಬೇರೊಬ್ಬರ ಕಿಡ್ನಿ ಸನಾಳಿಗೆ ಜೋಡಣೆ ಕಾರ್ಯ ನಡೆಯಬೇಕಿತ್ತು ಈ ಬೆನ್ನಲ್ಲೇ ಸನಾ ತನಗೆ ಕಿಡ್ನಿ ನೀಡುವ ಆ ಸಹೋದರನನ್ನು ಕೂಡ ಕಂಡು ಮಾತನಾಡಿಸಿ ಬಂದಿದ್ದಳು.
ಮುಂದಿನ ಚಿಕಿತ್ಸೆಯ ತಯಾರಿಯಲ್ಲಿದ್ದ ಸನಾಳಿಗೆ ನಿನ್ನೆ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.ಕಾರುಣ್ಯ ನಿಧಿ ಕರ್ನಾಟಕ ಸನಾಳ ಚಿಕಿತ್ಸೆಯ ಮುತುವರ್ಜಿವಹಿಸಿತ್ತು.ಇತ್ತೀಚಿಗೆ ಅಷ್ಟೇ ಅವಳಿಗೆ ವಿವಾಹ ನಿಶ್ಚಿತಾರ್ಥ ಕೂಡ ನಡೆದಿತ್ತು ಆದರೆ ಕಿಡ್ನಿ ಸಮಸ್ಯೆಯ ಗಂಭೀರತೆಯನ್ನು ಅರಿತು ಆ ಸಂಬಂಧ ಮುರಿದು ಹೋಗಿತ್ತು ಎಂದು ತಿಳಿದು ಬಂದಿದೆ.