dtvkannada

'; } else { echo "Sorry! You are Blocked from seeing the Ads"; } ?>

ಶಾಲಾಬಾಲಕಿಯೊಬ್ಬಳ ಪೋಷಕರು, ಜಾಸ್ತಿ ಮೊಬೈಲ್​ ಬಳಸಬೇಡ ಎಂದು ಆಕೆಗೆ ಹೇಳಿದ್ದಕ್ಕೆ, ಮನನೊಂದು 90 ಅಡಿ ಇರುವ ಈ ಜಲಪಾತದಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಪ್ರಯತ್ನಿಸಿದ ಘಟನೆ ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ಚಿತ್ರಕೋಟೆ ಎಂಬ ಜಲಪಾತದಲ್ಲಿ ನಡೆದಿದೆ.

ಮಂಗಳವಾರ ಈ ಘಟನೆ ನಡೆದಿದೆ. ಜಲಪಾತಕ್ಕೆ ಧುಮುಕುವ ಮೊದಲು ಆಕೆ ಸ್ವಲ್ಪ ಹೊತ್ತು ಅದರ ಅಂಚಿನಲ್ಲಿ ಓಡಾಡಿದ್ದಾಳೆ. ಇದನ್ನು ನೋಡಿದ ಸ್ಥಳೀಯರು/ಪ್ರವಾಸಿಗರು, ಆಕೆಯನ್ನು ಕೂಗಿ ನಿಲ್ಲುವಂತೆ ಹೇಳಿದ್ದಾರೆ. ಆದರೂ ಆಕೆ ಧುಮುಕಿಯೇಬಿಟ್ಟಿದ್ದಾಳೆ.

'; } else { echo "Sorry! You are Blocked from seeing the Ads"; } ?>

ಈ ವಿಡಿಯೋ ಅನ್ನು ಸುಶ್ರೀ ಸಂಗೀತಾ ಎಂಬ ಪತ್ರಕರ್ತೆ ಟ್ವೀಟ್ ಮಾಡಿದ್ದಾರೆ. ‘ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಪೋಷಕರು ಗದರಿದ್ದಕ್ಕೆ ಈ ಹುಡುಗಿ ಛತ್ತೀಸ್ಗಢದ ಚಿತ್ರಕೋಟೆಯ ಜಲಪಾತಕ್ಕೆ ಹಾರಿದ್ದಾಳೆ. ಮೊಬೈಲ್ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಸ್ಮಾರ್ಟ್ಫೋನ್ಗಳಿಂದ ನಿಮ್ಮ ಮಕ್ಕಳನ್ನು ದೂರವಿಡಿ’ ಎಂದು ಆಕೆ ಒಕ್ಕಣೆ ಬರೆದಿದ್ದಾರೆ.

— Sushree sangita dash (@Sushree_journo) July 19, 2023
ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ.

ಈ ಬಾಲಕಿ ಜಲಪಾತಕ್ಕೆ ಹಾರುವ ದೃಶ್ಯವನ್ನು ನೋಡಿದ ಯಾರಿಗೂ ಭಯವಾಗುತ್ತದೆ. ಅವರವರ ಮನೆಯ ಮಕ್ಕಳ ಬಗ್ಗೆ ಆತಂಕವಾಗುತ್ತದೆ. ಆದರೆ ಅದೃಷ್ಟವಶಾತ್​ ಈ ಬಾಲಕಿ ಬದುಕುಳಿತಿದ್ದಾಳೆ!
ವಿಷಯ ತಿಳಿದ ಪೊಲೀಸರು ತನಿಖೆ ನಡೆಸಿದ್ದಾರೆ. ಮೊಬೈಲ್​ ಬಳಕೆಯ ವಿಷಯವಾಗಿ ಪೋಷಕರು ಗದರಿದ್ದರಿಂದ ಆಕೆ ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನುವುದು ಸಾಬೀತಾಗಿದೆ. ಕೊನೆಗೆ ಆಕೆಯನ್ನು ಪೋಷಕರಿಗೆ ಒಪ್ಪಿಸಲಾಗಿದೆ.

ಚಿತ್ರಕೋಟೆ ಜಲಪಾತದ ಮೂಲ ಇಂದ್ರಾವತಿ ನದಿ. ಬಸ್ತಾರ್​ನ ಜಗದಲ್​ಪುರದಿಂದ 38.ಕೀಮೀ ದೂರದಲ್ಲಿ ಈ ಜಲಪಾತವಿದೆ. ಇದನ್ನು ಮಿನಿ ನಯಾಗರ ಜಲಪಾತ ಎಂದೂ ಕರೆಯುತ್ತಾರೆ.

ಮೊಬೈಲ್ ನೋಡಬೇಡ ಎಂದು ಮಕ್ಕಳನ್ನು ಗದರುವಾಗಲೂ ಪೋಷಕರ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ. ಹೀಗಿದ್ದಾಗ ಪೋಷಕರು ಹೇಳಿದ್ದರ ಕಡೆ ಮಕ್ಕಳ ಗಮನವಾದರೂ ಹೇಗೆ ಹೋಗಬೇಕು? ಇದು ಇಂದಿನ ವಿಪರ್ಯಾಸ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!