ಮಂಗಳೂರು: ದ ಕ ಜಿಲ್ಲೆಯಲ್ಲಿ ಎಡೆ ಬಿಡದೆ ಬೀಳುತ್ತಿರುವ ಬಾರೀ ಗಾಳಿ ಮಳೆಗೆ ದ.ಕ ಜಿಲ್ಲಾಧಿಕಾರಿ ಮುಗಿಲನ್ ಮುಲೈ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿರಂತರವಾಗಿ ಶಾಲೆ ರಜೆ ನೀಡುತ್ತಿದ್ದು ಇದೀಗ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿಗಳು ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದೆ.
ತನ್ನ ಕಚೇರಿಯೊಂದರಲ್ಲಿ ದ.ಕ ಜಿಲ್ಲಾಧಿಕಾರಿಯ ಫೋಟೋಗಳನ್ನು ಅಂಟಿಸಿ ಕೂತಿರುವ ಓರ್ವ ವಿದ್ಯಾರ್ಥಿಯ ಬಳಿ ಆತನ ಸಹಪಾಟಿ ಬಂದು ಇದು ಯಾರ ಫೋಟೋ ಇಷ್ಟೊಂದು ಅಂಟಿಸಿದ್ದೀಯಾ ಎಂದು ಕೇಳುತ್ತಾನೆ ಅದಕ್ಕೆ ಆ ವಿದ್ಯಾರ್ಥಿ ಇದು ನಮ್ಮ ಡಿ,ಸಿ ಅವರ ಹೆಸರು ಹೇಳಲು ಕಷ್ಟ ಉಂಟು ಆದರೆ ಮಳೆ ಬಂದಾಗಳೆಲ್ಲಾ ಶಾಲೆಗೆ ರಜೆ ನೀಡುತ್ತಾರೆ ಅವರೇ ಇವರು ಎಂದು ಜಿಲ್ಲಾಧಿಕಾರಿ ಫೋಟೋ ತೋರಿಸಿ ಬನ್ನಿಸುತ್ತಾನೆ.ಆವಾಗಲೇ ಹೊರಗಿನಿಂದ ಬಂದ ಮತ್ತೊರ್ವ ಜಿಲ್ಲಾಧಿಕಾರಿಗೆ ಜೈ ಎಂದು ಘೋಷಣೆ ಕೂಗುತ್ತಾನೆ.
ವಿದ್ಯಾರ್ಥಿಗಳು ಮಾಡಿದ ಈ ವಿಡಿಯೋ ಅಂತೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನೆಟ್ಟಿಗರು ಅಂತೂ ವಿದ್ಯಾರ್ಥಿಗಳ ಕುಚೇಷ್ಠ ನೋಡಿ ಬಿದ್ದು ಬಿದ್ದು ನಗುತ್ತಿದ್ದಾರೆ.ವಿಡಿಯೋ 👇