';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಪುತ್ತಿಲ ಪರಿವಾರಕ್ಕೆ ಪೊಲೀಸ್ ಇಲಾಖೆಯಿಂದ ಇದೀಗ ಸಂಕಷ್ಟ ಎದುರಾಗಿದೆ.
ನಿಡ್ಪಳ್ಳಿ ಮತ್ತು ಆರ್ಯಾಪು ಪಂಚಾಯತ್ ಗಳಲ್ಲಿ ಜುಲೈ 22 ರಂದು ನಡೆದ ಉಪ ಚುನಾವಣೆಯ ಫಲಿತಾಂಶ ನಿನ್ನೆ ಜುಲೈ 26 ರಂದು ಹೊರ ಬಿದ್ದಿತ್ತು.ಈ ನಿಟ್ಟಿನಲ್ಲಿ ಆರ್ಯಾಪು ಪಂಚಾಯತ್ ಚುನಾವಣೆಯಲ್ಲಿ ಪುತ್ತಿಲ ಪರಿವಾರದ ಸದಸ್ಯ ಸುಬ್ರಮಣ್ಯ ಬಲ್ಯಾಯ ವಿಜಯ ಸಾದಿಸಿದ್ದರು.
ಈ ನಿಟ್ಟಿನಲ್ಲಿ ಪುತ್ತೂರು ಮಿನಿ ವಿಧಾನಸೌಧದಿಂದ ಪುತ್ತಿಲ ಪಾರಿವಾರದ ಕಚೇರಿ ವರೆಗೆ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಅನುಮತಿ ಪಡೆಯದೇ ವಿಜಯೋತ್ಸವ ನಡೆಸಿದ್ದು ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪುತ್ತಿಲ ಪರಿವಾರದ ವಿರುದ್ಧ ಸಾರ್ವಜನಿಕ ಶಾಂತಿಭಂಗ ಕೇಸು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.