ಉಳ್ಳಾಲ: ಶತ ಶತಮಾನ ಕಳೆದರೂ ಎಷ್ಟೇ ಪ್ರಯತ್ನ ಪಟ್ಟರೂ ಜಗತ್ತಿನ ವಿಜ್ಞಾನಿಗಳಿಗೆ ಕೃತಕವಾಗಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ ದಾನಿಗಳ ದಾನದಿಂದ ಮಾತ್ರ ರಕ್ತವನ್ನು ಸರಿದೂಗಿಸಲು ಸಾಧ್ಯ ಎಂದು ಖ್ಯಾತ ದಂತ ವೈದ್ಯರಾದ ಡಾ,ಮುರಳಿ ಮೋಹನ್ ಅಭಿಪ್ರಾಯ ಪಟ್ಟರು.
ಅವರು ಇಂದು 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಫರ್ ಸ್ಪೋರ್ಟ್ಸ್ &ಕಲ್ಚರಲ್ ಅಶೋಸಿಯೇಶನ್ (ರಿ)ಹಾಗೂಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಜಂಟಿ ಆಶ್ರಯದಲ್ಲಿ ಫಿದಾ ಗೈಸ್ ಮಂಚಿಲ, ಸುಲ್ತಾನ್ ಮಂಚಿಲ,ಫ್ರೆಂಡ್ಸ್ ಮಂಚಿಲ, ಪೊಸ ಕುರಲ್ ಬಳಗ ಕೊಲ್ಯ, ವೆಲ್ಫೇರ್ ಅಶೋಸಿಯೇಶನ್ ಮಂಚಿಲ, ನಾಗರಿಕರು ಮಂಚಿಲ, SSF & SYS ಮಂಚಿಲ ಯುನಿಟ್ ಇವರೆಲ್ಲರ ಸಹಕಾರದೊಂದಿಗೆ ಯೆನಪೋಯ ಆಸ್ಪತ್ರೆ ರಕ್ತ ನಿಧಿ ದೇರಳಕಟ್ಟೆ ಇವರ ಸಹಯೋಗದಲ್ಲಿ ಮರ್ಹೂಂ ಅಬ್ದುಲ್ ರಹ್ಮಾನ್ ಹಾಜಿ (ಬೆಂಗ್ರೆ ಹಾಜಿ) ಮಂಚಿಲ ಇವರ ಸ್ಮರಣಾರ್ಥ ಆಯೋಜಿಸಿದ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರದಲ್ಲಿ ರಕ್ತದಾನದ ಬಗ್ಗೆ ತೊಕ್ಕೋಟು ಮಂಚಿಲ ಸಫರ್ ಕ್ಲಬ್ ಸಭಾಂಗಣದಲ್ಲಿ ಮಾಹಿತಿ ನೀಡಿದರು.
ಡ್ರಗ್ಸ್ ಬಗ್ಗೆ ಮಾತಾಡಿ ಮಾದಕ ವಸ್ತುಗಳ ಬಳಕೆ ಕುಟುಂಬದ ಸರ್ವನಾಶಕ್ಕೆ ಕಾರಣ ಎಂದು ಡಾ, ರೂಬೆನ್ ಅಬ್ರಹಾಂ ಜಾಕೋಬ್ ತಿಳಿಸಿದರು. ವೇದಿಕೆಯಲ್ಲಿ ಉಲ್ಲಾಲ ನಗರಸಭಾ ಉಪಾಧ್ಯಕ್ಷರಾದ ಅಯ್ಯೂಬು ಮಂಚಿಲ,
ಸಫರ್ ಸ್ಫೋಟ್ಸ್ ಕ್ಲಬ್ ಗೌರವ ಅಧ್ಯಕ್ಷ ರಾದ ಯು,ಎಚ್, ಫಾರೂಕ್, ಸಾಗರ್ ಟೆಕ್ಸ್ ಟೈಲ್ಸ್ ಮಾಲಕ ಇಸ್ಮಾಯಿಲ್, ಯೊನೋಪೊಯ ಆಸ್ಪತ್ರೆ ವೈದ್ಯರಾದ ಶುಭಾ, ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಅಧ್ಯಕ್ಷರಾದ ನಝೀರ್ ಹುಸೇನ್ ವಹಿಸಿದ್ದರು.
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಕಾರ್ಯನಿರ್ವಾಹಕ ರಾದ ಫಯಾಝ್ ಅಲಿ ಬೈಂದೂರು, ಬಷೀರ್ ಮಂಗಳೂರು, ಸಫ್ವಾನ್ ಕಲಾಯಿ, ಖಾದರ್ ಮಂಚೂರು, ಅಶ್ರಫ್ ಮಂಚಿಲ,ಅಲ್ಮಾಝ್, ನವಾಝ್ ಉಪಸ್ಥಿತರಿದ್ದರು, ಸಫರ್ ಸ್ಫೋಟ್ಸ್ ಕ್ಲಬ್ ನ ಪದಾಧಿಕಾರಿಗಳಾದ ಮುನ್ನಾ ಜಾಸಿಂ,ಮಕ್ಸೂದ್ ಮಂಚಿಲ,ಬಿ.ಎಂ.ಮುಸ್ತಾಫ,ಮನ್ಸೂರು,ಯು,ಎಚ್,ಫತಾಕ್,ರಹಿಮಾನ್ ಸಾಗರ್, ಫಾರೂಕು,ಅನ್ಸಾರ್ ಮಂಚಿಲ, ಶರೀಫ್, ಸಮದ್, ನೌಶಾದ್ ,ಇನ್ನೀತರರು ಉಪಸ್ಥಿತರಿದ್ದರು.
ಅಬ್ಬಾಸ್ ಮದನಿ ಬಂಡಾಡಿ ದುವಾ ನೇರವೇರಿಸಿದರು, ಹಾಫಿಲ್ ನಿಬಾಲ್ ಕಿರಾಅತ್ ಪಠಿಸಿದರು.ಝಾಕಿರ್ ಇಕ್ಲಾಸ್ ಸ್ವಾಗತಿಸಿದರು.ಸತ್ತಾರ್ ಪುತ್ತೂರು ವಂದಿಸಿದರು.
ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.