dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ಗೆಳೆಯನನ್ನು ರಕ್ಷಿಸಲು ಹೋಗಿ ತಾನು ಜೀವ ಕಳೆದುಕೊಂಡ ದಾರುಣ ಘಟನೆ ನಗರದ ಪಡೀಲ್ ಅಳಪೆಪಡ್ಡು ಎಂಬಲ್ಲಿ ನಡೆದಿದೆ.

ನೀರಿನ ದಡದಲ್ಲಿ ಇಬ್ಬರು ಯುವಕರು ಕೂತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.ಈ ಒಂದು ಘಟನೆಯಲ್ಲಿ ಮೃತಪಟ್ಟ ಯುವಕರನ್ನು ಅಳಪೆ ಪಡ್ಡುರೆಂಜ ನಿವಾಸಿ ವರುಣ್(೨೭) ಮತ್ತು ಎಕ್ಕೂರು ಕಾಲೊನಿ ನಿವಾಸಿ ವೀಕ್ಷಿತ್ (೨೮) ಎಂದು ಗುರುತಿಸಲಾಗಿದೆ.

ಇಂದು ಸಂಜೆ 5 ಗಂಟೆಗೆ 6 ಮಂದಿ ಯುವಕರ ತಂಡವೊಂದು ಗೆಳೆಯರ ಬಳಗ ಒಟ್ಟಾಗಿ ಕ್ರಿಕೆಟ್ ಆಡಲು ತೆರಳಿದ್ದರು.ಈ ಸಂದರ್ಭದಲ್ಲಿ ವರುಣ್ ಮತ್ತು ವೀಕ್ಷಿತ್ ರೈಲ್ವೆ ‌ಹಳಿಯ ಪಕ್ಕದ ಹಳ್ಳದ ದಂಡೆಯಲ್ಲಿ ಕುಳಿತಿದ್ದರೆಂದು ತಿಳಿದು ಬಂದಿದೆ.

ಹಳ್ಳದ ದಂಡೆಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ ವರುಣ್ ನೀರಿಗೆ ಬಿದ್ದಿದ್ದು ಇದನ್ನು ಗಮನಿಸಿದ ಇನ್ನೋರ್ವ ಜೊತೆಗಿದ್ದ ಗೆಳೆಯ ವೀಕ್ಷಿತ್ ತಕ್ಷಣ ಗೆಳೆಯನನ್ನು ರಕ್ಷಿಸಲು ನೀರಿಗೆ ಧುಮುಕಿದ್ದಾರೆ.ಆದರೆ ಹಳ್ಳದಲ್ಲಿ ಹೂಳು ಅತಿಯಾಗಿದ್ದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಇತ್ತ ರಕ್ಷಿಸಲು ಹೊರಟವನು ಬರಲಿಲ್ಲ ಮುಂಚೆ ಬಿದ್ದವನು ಏಳಲಿಲ್ಲ ಅಂತೂ ಇಬ್ಬರು ಗೆಳೆಯರು ಜೊತೆಯಾಗಿಯೇ ಇಹಲೋಕ ತ್ಯಜಿಸಿದ್ದಾರೆ.ತೀವ್ರ ಹುಡುಕಾಟದ ಬಳಿಕ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!