ಮಂಗಳೂರು: ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಹೆಡೆಮುರಿ ಕಟ್ಟಿದ ಮಂಗಳೂರು ಮಹಿಳಾ ಠಾಣಾ ಪೊಲೀಸರು ಆರೋಪಿಯನ್ನು ಜೈಲು ಕಂಬಿ ಎನಿಸುವಂತೆ ಮಾಡಿದ್ದಾರೆ.
ಘಟನೆಯ ಆರೋಪಿಯನ್ನು ಉಳ್ಳಾಲ ಪೇಟೆಯ ನಿವಾಸಿ ಮಹಮ್ಮದ್ ಶಾಫಿ ಎಂದು ಗುರುತಿಸಲಾಗಿದೆ.
12 ವರ್ಷ 10 ತಿಂಗಳು ಪ್ರಾಯದ ಅಪ್ರಾಪ್ತ ಬಾಲಕಿ ತನ್ನ ತಾಯಿಯೊಂದಿಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಬಂದು ನೀಡಿದ ಲಿಖಿತ ದೂರು ನೀಡಿದ್ದು ಬಾಲಕಿ 8 ನೇ ತರಗತಿಯಲ್ಲಿ ಕಲಿಯುತ್ತಿದ್ದು, ಉಳ್ಳಾಲ ಪೇಟೆಯ ಮಹಮ್ಮದ್ ಶಾಫಿ ಯಾನೆ ಶಾಫಿ ಎಂಬವನ ಪರಿಚಯವಿದ್ದು, ದಾರಿಯಲ್ಲಿ ಕಾಣಸಿಕ್ಕಿದಾಗ ಆಗಾಗ ಮಾತನಾಡಿಸುತ್ತಿದ್ದ ಎಂದು ತಿಳಿಸಿದ್ದಾಳೆ.
ಇದೇ ವರ್ಷದ ಜನವರಿ ತಿಂಗಳಲ್ಲಿ ಮನೆಯಲ್ಲಿ ಒಬ್ಬಳೇ ಇದ್ದ ಸಮಯ ಶಾಫಿ ಬಾಯಿಗೆ ಕೈ ಹಿಡಿದು, ಪಕ್ಕದ ರೂಮಿಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆಂದು ವರದಿಯಾಗಿದೆ.
ಅಲ್ಲದೇ ಇತರೇ ದಿನಗಳಲ್ಲಿ ಅವಳು ಒಬ್ಬಳೇ ಇದ್ದಾಗ ಮನೆಗೆ ಹೋಗಿ ಸರಣಿ ಅತ್ಯಾಚಾರ ಕೂಡ ಮಾಡಿರುವ ಬಗ್ಗೆ ಇದೀಗ ಬೆಳಕಿಗೆ ಬಂದಿದೆ.
ಇದರಿಂದ ಬಾಲಕಿ 6 ತಿಂಗಳ ಗರ್ಭಿಣಿಯಾಗಿದ್ದು, ಸದ್ರಿ ಅಪ್ರಾಪ್ತ ಬಾಲಕಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ. 58/2023 ಕಲಂ 376, 448, 506 ಐಪಿಸಿ ಮತ್ತು 6 ಪೋಕ್ಸೋ ಕಾಯ್ದೆಯಂತೆ ಕೇಸು ದಾಖಲಿಸಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಮತ್ತು ಉಳ್ಳಾಲ ಪೊಲೀಸ್ ಠಾಣಾ ಪೊಲೀಸರ ನೆರವಿನೊಂದಿಗೆ ಆರೋಪಿ ಶಾಫಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.