ಫಾರೂಕ್ ಜುಮಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಆಡಳಿತ ಕಮೀಟಿ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಬದ್ರಿಯಾ ಯಂಗ್‌ಮೆನ್ಸ್ ಅಸೋಸಿಯೇಷನ್ ವತಿಯಿಂದ ಲೋಗೋ ಬಿಡುಗಡೆ ಮತ್ತು ಸಮವಸ್ತ್ರ ಪ್ರದರ್ಶನ ಕಾರ್ಯಕ್ರಮ ಹಯಾತುಲ್ ಇಸ್ಲಾಂ ಮದ್ರಸ ಶಾಂತಿನಗರದಲ್ಲಿ ನಡೆಯಿತು


ಪ್ರಸ್ತುತ ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬ್ ಇಬ್ರಾಹಿಂ ಬಾತೀಶ್ ಸಅದಿ ಮತ್ತು ಮದ್ರಸಾ ಸದ್ರ್ ಉಸ್ತಾದ್ ಸಿನಾನ್ ಹನೀಫಿ ಹಾಗೂ ಜಮಾಅತ್ ಆಡಳಿತ ಕಮೀಟಿ ನೇತೃತ್ವದಲ್ಲಿ ಲೋಗೋ ಬಿಡುಗಡೆಯ ಮೂಲಕ ಆರಂಭವಾದ ಪ್ರಸ್ತುತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸದ್ರ್ ಉಸ್ತಾದ್ ಸಿನಾನ್ ಹನೀಫಿ ಮತ್ತು ಖತೀಬರಾದಂತಹ ಇಬ್ರಾಹಿಂ ಬಾತೀಶ್ ಸಅದಿ ಬದ್ರಿಯಾ ಯಂಗಮೆನ್ಸ್ ಅಸೋಸಿಯೇಷನ್ ನೀಡಿದ ಸಾಂತ್ವನ ಸೇವೆಯ ಬಗ್ಗೆ ಸವಿಸ್ತರವಾಗಿ ವಿವರಿಸಿದರು ಮದ್ರಸಾದಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಕುಡಿಯುವ ನೀರಿನ ಫಿಲ್ಟರ್ ಪ್ರದರ್ಶನ ಮಾಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಜಮಾಅತ್ ಕಮೀಟಿ ಅಧ್ಯಕ್ಷ ನೌಶಾದ್ ಕಾರ್ಯದರ್ಶಿ ಅನ್ವರ್ ಮದ್ರಸಾ ಅಧ್ಯಪಕರಾದ ಅಬ್ಬಾಸ್ ಮುಸ್ಲಿಯಾರ್ ಕಲ್ಮಿಂಜ ಉಸ್ತುವಾರಿಗಳಾದ ಹೈದರ್ ಆಜ್ಮಲ್,ಇಬ್ರಾಹಿಂ ಬದ್ರಿಯಾ ಯಂಗ್ಮೆನ್ಸ್ ಅಧ್ಯಕ್ಷ ಅನ್ಸಾರ್ ಕಾರ್ಯದರ್ಶಿ ತನ್ಸೀರ್, ಜೊತೆ ಕಾರ್ಯದರ್ಶಿ ಆಶಿಕ್ ಮತ್ತು ಫಯಾಜ್ ಇನಿತರ ಸದಸ್ಯರು ಮತ್ತು ಊರಿನ ಹಿರಿಯ ವ್ಯಕ್ತಿಗಳು ಭಾಗವಹಿಸಿದರು.