ಶಿವಮೊಗ್ಗ: ದೊಡ್ಡಪೇಟೆ ಠಾಣೆಯಲ್ಲಿ ಒಂದು ಗಂಟೆಗಳ ಕಾಲ 8 ವರ್ಷದ ಬಾಲಕ PI ಹುದ್ದೆಯನ್ನು ಅಲಂಕರಿಸುವ ಮೂಲಕ ದೊಡ್ಡ ಪೇಟೆ ಪೊಲೀಸ್ ಠಾಣೆಯ ಅತೀ ಕಿರಿಯ ಪೊಲೀಸ್ ಅಧಿಕಾರಿ ಎಂಬ ಕೀರ್ತಿಗೆ ಅಜಾನ್ ಖಾನ್ ಪಾತ್ರರಾಗಿದ್ದಾನೆ.

ಹೃದಯ ಸಂಬಂಧಿತ ಕಾಯಿಲೆಯಿಂದ ಬಳಳುತ್ತಿರುವ 8 ವರ್ಷದ ಪೋರನಿಗೆ ಪೊಲೀಸ್ ಅಧಿಕಾರಿ ಆಗಬೇಕೆಂಬ ಆಸೆ ಆದರೆ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಳುತ್ತಿರುವ ಆಜಾನ್ ಖಾನ್ ನ ತಂದೆ ಸ್ಥಳೀಯ ಪೊಲೀಸ್ ಅಧಿಕಾರಿಗೆ ತನ್ನ ಮಗನ ಆಸೆಯನ್ನು ತಿಳಿಯಪಡಿಸಿದ್ದು ತಂದೆಯ ಮನವಿಗೆ ಸ್ಪಂದಿಸಿದ ದೊಡ್ಡಪೇಟೆ ಪೊಲೀಸ್ ಅಧಿಕಾರಿ ತನ್ನ ಕುರ್ಚಿ ಮತ್ತು ಅಧಿಕಾರವನ್ನು ನಿನ್ನೆ ದಿನ ಒಂದು ಗಂಟೆಗಳ ಕಾಲ ಆಜಾನ್ ಖಾನ್ ಗೆ ಬಿಟ್ಟು ಕೊಡಲಾಯಿತು.

ಮನೆಯಿಂದ ಪೊಲೀಸ್ ವಾಹನದಲ್ಲೇ ಬಂದು ಅಧಿಕಾರ ಸ್ವೀಕರಿಸಿದ 8 ರ ಪೋರ ನೂತನ ಅಧಿಕಾರ ಸ್ವೀಕರಿಸಲು ಬರುವ ಪೊಲೀಸ್ ಅಧಿಕಾರಿಗೆ ನೀಡುವ ಎಲ್ಲಾ ಗೌರವಗಳನ್ನು ಆಜಾನ್ ಖಾನ್ ಗೆ ನೀಡಿ ಭರದ ಸ್ವಾಗತ ನೀಡಲಾಯಿತು.

ಅನಾರೋಗ್ಯ ಪೀಡಿತ 8 ರ ಹರೆಯದ ಹುಡುಗನ ಆಸೆಗೆ ಬಣ್ಣ ಹಚ್ಚಿದ ದೊಡ್ಡಪೇಟೆ ಪೋಲೀಸರ ಮಾನವೀಯ ನೆಲೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಪೊಲೀಸ್ ಸಮವಸ್ತ್ರದಲ್ಲೇ ಬಂದ ಪೊಲೀಸ್ ಅಧಿಕಾರಿ ಆಜಾನ್ ಖಾನ್ ಹಿರಿಯ ಅಧಿಕಾರಿಗೆ ಸೆಲ್ಯೂಟ್ ಹೊಡೆದು ಠಾಣೆಗೆ ತೆರೆಳಿದ್ದಾರೆ.ಇನ್ನು ಪೊಲೀಸ್ ಸಿಬ್ಬಂದಿಯೋರ್ವರು ಒಂದು ದಿನ ರಜೆ ಕೇಳಿ ಮನವಿ ಮಾಡಿದ್ದು ಎರಡು ದಿನಗಳ ರಜೆಯನ್ನು ನೀಡಿದ್ದಾನೆ.