dtvkannada

'; } else { echo "Sorry! You are Blocked from seeing the Ads"; } ?>

ವರದಿ- ಕಮಲೇಶ್ ಸುಬ್ರಮಣ್ಯ

ಸಾಮಾನ್ಯವಾಗಿ ಕೇರಳ, ಕರ್ನಾಟಕ ಭಾಗದಲ್ಲಿ ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ. ಆಹಾರದಿಂದ ಹಿಡಿದು ಆಚರಣೆಗಳೆಲ್ಲವೂ ಸಂಭ್ರಮದಲ್ಲೇ ಮಾಡುತ್ತಾರೆ. ನಿಶ್ಚಿತಾರ್ಥ, ಮದುವೆ ಅಂದರೆ ಸಾಕು ಮನೆಯವರಿಗೆ, ಕುಟುಂಬದವರಿಗೆ ಎಲ್ಲಿಲ್ಲದ ಖುಷಿ. ಕೆಲವೊಂದು ಬಾರಿ ಕೆಲವೊಂದು ಅಡಚಣೆಗಳಿಂದ ಮದುವೆ/ನಿಶ್ಚಿತಾರ್ಥ ಕ್ಯಾನ್ಸಲ್ (Cancel) ಮಾಡುತ್ತಾರೆ. ಇಲ್ಲೊಂದು ಇದೇ ರೀತಿಯ ಕಥೆ. ನಿಶ್ಚಿತಾರ್ಥ ದಿನ ವರನ ಕಡೆಯವರು ತಂದ ಗಿಫ್ಟ್ ನೋಡಿ, ಈ ಸಂಬಂಧ ನಮಗೆ ಬೇಡ ಎಂದು ವಧುವಿನ ಕಡೆಯವರು ಗಲಾಟೆ ಎಬ್ಬಿಸಿದ್ದಾರೆ. ಕಾರಣ ಕೇಳಿದ್ರೆ ನಿಮ್ಗೂ ವಿಶೇಷ ಅಂತೆನಿಸುತ್ತದೆ.

'; } else { echo "Sorry! You are Blocked from seeing the Ads"; } ?>

ಹೌದು. ಮಂಜಿನ ನಗರಿ ಮಡಿಕೇರಿ ಭಾಗದಿಂದ ಕಡಬ ತಾಲೂಕಿನ ಸುಂಕದಕಟ್ಟೆ ಎಂಬ ಕುಗ್ರಾಮಕ್ಕೆ ವರನ ಕಡೆಯವರು ಮದುವೆ ನಿಶ್ಚಿತಾರ್ಥಕ್ಕೆಂದು ಬಂದಿದ್ದರು. ಇತ್ತ ವಧುವಿನ ಮನೆಯಲ್ಲಿ ಅತಿಥಿಗಳಿಗೆ ಭಾರೀ ಭೋಜನ ತಯಾರಾಗುತ್ತಿತ್ತು. ವರನ ಕಡೆಯವರು ವಧುವಿಗೆಂದು ಚಾಕಲೇಟ್, ಸಿಹಿತಿನಿಸು, ಡ್ರೆಸ್, ಚಿನ್ನಾಭರಣದ ಜೊತೆ ಅದ್ಧೂರಿಯಾಗಿ ಬಂದಿದ್ದರು.

ನಿಶ್ಚಿತಾರ್ಥ ನಡೆಯಿತು, ಮದುವೆ ಜನವರಿ ತಿಂಗಳಲ್ಲಿ ಎಂಬುವುದು ಅಲ್ಲೇ ನಿಗದಿಯಾಯಿತು. ಆಗ ವರನ ಕಡೆಯವರು ತಮ್ಮ ಭಾವೀ ಸೊಸೆಗೆ ಪ್ರೀತಿಯಿಂದ ತಂದಿದ್ದ ಚಾಕಲೇಟ್ಸ್, ಉಡುಪು, ಚಪ್ಪಲಿ, ಗಿಫ್ಟ್ ಬಾಕ್ಸ್’ಗಳನ್ನು ಕೊಡಲು ಮುಂದಾದರು. ಆಗ ನೋಡಿ ಶುರುವಾದದ್ದು ಕಿರಿಕ್ !

'; } else { echo "Sorry! You are Blocked from seeing the Ads"; } ?>

ವರನ ಕಡೆಯವರು ತಂದ ಗಿಫ್ಟ್ ಬಾಕ್ಸ್ ನೋಡಿದ ವಧುವಿನ ಮಾವನಿಗೆ ಅದೇನಾಯ್ತೊ ಗೊತ್ತಿಲ್ಲ! ಈ ಗಿಫ್ಟ್ ನಮ್ಮ ಮಗಳಿಗೆ ಅಗತ್ಯವಿಲ್ಲ, ನಮ್ಮ ಫ್ಯಾಮಿಲಿಯಲ್ಲಿ ಈಗೆಲ್ಲಾ ಗಿಫ್ಟ್ ಕೊಡುವ ಆಚರಣೆ ಮಾಡುವುದಿಲ್ಲ ಎಂದು ಹೊಸ ವರಸೆ ಶುರುಹಚ್ಚಿದರು. ಚರ್ಚೆ- ವಾಗ್ವಾದ ತಾರಕಕ್ಕೇರಿತು. ಹುಡುಗಿಯ ಮಾವ(ತಾಯಿಯ ಸಹೋದರನ) ರಂಪಾಟ, ಚೀರಾಟ ನೋಡಿ ದೂರದಿಂದ ಬಂದ ಹುಡುಗನ ಕುಟುಂಬಸ್ಥರು ಈ ಸಂಬಂಧ ನಮಗೆ ಬೇಡ ಎಂದು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗಿದ್ದಾರೆ.
ಹುಡುಗಿಯ ಮಾವ ಮಾಡಿದ ಅವಾಂತರದಿಂದ ಮದುವೆ ನಿಶ್ಚಿತಾರ್ಥ ಕಾರ್ಯ ನಿಂತುಹೋಗಿದೆ.

ಬಗೆಬಗೆಯ ಚಾಕಲೇಟು, ಗಿಫ್ಟ್ ತಂದಿದ್ದಾರೆ ಎಂಬ ಕಾರಣಕ್ಕೆ ಜಗಳಕ್ಕಿಳಿದ ಮಾವನ ಅಧಿಕಪ್ರಸಂಗಿತನದಿಂದ ಬಡ ಅನಾಥ ಹೆಣ್ಣು ಕಣ್ಣೀರಲ್ಲಿ ಮುಳುಗುವಂತಾಗಿದೆ. ಹಲವಾರು ಕನಸುಗಳನ್ನು ಹೊತ್ತು, ತನ್ನ ಭಾವೀ ಪತ್ನಿಗೆಂದು ಸಂತೋಷದಿಂದ ತಂದ ಚಾಕಲೇಟ್, ಗಿಫ್ಟ್, ಡ್ರೆಸ್ ಎಲ್ಲವನ್ನೂ ವಾಪಾಸ್ ಪಡೆದುಕೊಂಡ ವರ ಹಾಗೂ ಕುಟುಂಬಸ್ಥರು ಬೇಸರದಿಂದ ಮಡಿಕೇರಿಯತ್ತ ವಾಪಾಸಾಗಿದ್ದಾರೆ.

ಒಬ್ಬ ಮಾಡಿದ ಕಿರಿಕ್, ಅಧಿಕಪ್ರಸಂಗಿತನದಿಂದ ಇಡೀ ಕುಟುಂಬವೇ ಪ್ರಶ್ಚಾತಾಪ ಪಡುವಂತಾಗಿದೆ. ಸಣ್ಣ ಸಣ್ಣ ವಿಷಯಕ್ಕೂ ಜಗಳ ಮಾಡುವವರನ್ನು ಊರಿನಿಂದಲೇ ಹೊಡೆದು ಓಡಿಸಬೇಕು ಎಂದು ಊರಿಡೀ ಮಾತನಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಈ ರೀತಿಯ ಘಟನೆಗಳು ಹಲವಾರು ಇವೆ. ಆದರೆ ಕೆಲವೊಂದು ಬಾರಿ ಎರಡು ಕುಟುಂಬದವರ ಜಗಳದಿಂದ ಮದುವೆ ನಿಶ್ಚಿತಾರ್ಥ ರದ್ದಾಗುತ್ತದೆ. ಕೆಲವೊಮ್ಮೆ ಏನಾದರು ದೋಷಗಳಿಂದ ಮದುವೆಗಳು ರದ್ದಾಗುತ್ತದೆ. ಆದರೆ ಇದು ವಿಶೇಷ ಎಂದು ಹೇಳ್ಬಹುದು. ಏಕೆಂದರೆ ಪ್ರತಿಯೊಂದು ಕುಟುಂಬವೂ ತನ್ನ ಮನೆಗೆ ಬರುವಂತಹ ಸೊಸೆಗೆ ಪ್ರೀತಿಯಿಂದ ಏನಾದರು ಉಡುಗೊರೆಯನ್ನು ನೀಡುತ್ತಾರೆ. ಆದರೆ ಹುಡುಗಿಯ ಕಡೆಯವರು ಈ ರೀತಿ ವರ್ತಿಸಬಹುದೆಂದು ವರನ ಕುಟುಂಬದವರು ಕನಸಲ್ಲೂ ಅಂದುಕೊಡಿರಲಿಕ್ಕಿಲ್ಲ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!