ಪುತ್ತೂರು: ನಮಗೆ ಕಷ್ಟ ಬಂದಾಗ, ಜೀವನದಲ್ಲಿ ಸೋತಾಗ ನಮಗೆ ದೇವರ ನೆನಪಾಗುತ್ತದೆ, ನಾವು ದೇವರಿರುವ ಜಾಗವನ್ನು ಹುಡುಕಿಕೊಂಡು ಹೋಗುತ್ತೇವೆ, ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ , ಹಬ್ಬ ಹರಿದಿನಗಳಲ್ಲೂ ನಾವು ದೇವರ ಬಳಿ ಹೋಗುತ್ತೇವೆ ಆದರೆ ನಮ್ಮ ಮನೆಯೊಳಗೇ ಇರುವ ತಂದೆ ತಾಯಿ ಎಂಬ ದೇವರನ್ನು ಮರೆvತುಬಿಡುತ್ತೇವೆ, ತಂದೆ ತಾಯಿಯ ಮನಸ್ಸಿಗೆ ನೋವು ಮಾಡಿದವನಿಗೆ ದೇವರ ಆಶೀರ್ವಾದ ಎಂದಿಗೂ ಲಭಿಸುವುದಿಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ದೂಮಡ್ಕದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ನಡೆದ ೨೭ ನೇ ವರ್ಷದ ಮೊಸರುಕುಡಿಕೆ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ಆಶೀರ್ವಾದವನ್ನು ನಾವು ಮೊದಲು ಪಡೆಯಬೇಕು, ಜೀವ ಇರುವಾಗ ನಾವು ಅವರ ಚಾಕರಿಯನ್ನು ಮಾಡಬೇಕು. ಮುದಿ ಪ್ರಾಯದಲ್ಲಿ ಅವರನ್ನು ಆಶ್ರಮಕ್ಕೆ ಸೇರಿಸುವ ಸಂಸ್ಕಾರ ನಮ್ಮದಲ್ಲ ನಾವು ತಂದೆ ತಾಯಿಯನ್ನು ಎಲ್ಲಿಯತನಕ ಮನಸಾರೆ ಪ್ರೀತಿಸುವುದಿಲ್ಲವೋ ಅಲ್ಲಿಯವರೆಗೆ ನವು ಜೀವನದಲ್ಲಿ ಉದ್ದಾರ ಆಗುವುದೇ ಇಲ್ಲ ಎಂದು ಹೇಳಿದ ಶಾಸಕರು ನಮಗೆ ದೇವರು ಒಲಿಯಬೇಕಾದರೆ ಮೊದಲು ಜನ್ಮ ಕೊಟ್ಟ ದೇವರನ್ನು ಮನೆಯಲ್ಲೇ ಪೂಜಿಸಬೇಕು ಎಂದು ಹೇಳಿದರು.
ನಾವು ಕಷ್ಟ ಬಂದಾಗ ಪ್ರಶ್ನೆ ಕೇಳಲು ಹೋಗುತ್ತೇವೆ, ನಮಗೆ ಯಾರಾದರೂ ಏನಾದರು ಮಾಡಿದ್ದಾರ ಎಂದು ಕೇಳಲು ಹೋಗುತ್ತೇವೆ ಅವರ ಬಳಿ ಹೋಗುವ ಬದಲು ತಂದೆ ತಾಯಿಯನ್ನು ಗೌರವಿಸಿ ಅಷ್ಟೇ ಸಾಕು ನಮಗೆ ದೇವರು ಎಲ್ಲವನ್ನೂ ಕೊಡುತ್ತಾನೆ ಎಂದು ಹೇಳಿದರು.ವೇದಿಕೆಯಲ್ಲಿ ಬೈಲಾಡಿ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಭಟ್ ಘಾಟೆ, ಬೈಲಾಡಿ ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ಬ್ಥರಮಜಲು, ದೂಮಡ್ಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಗಣೇಶ್ ರೈ, ದೂಮಡ್ಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷರಾದ ಶೀನಪ್ಪ ನಾಯ್ಕ, ಬೆಟ್ಟಂಪಾಡಿ ಗ್ರಾಪಂ ಸದಸ್ಯ ನವೀನ್ ರೈ, ಮಹಾಲಿಂಗ ನಾಯ್ಕ, ಬೆಳಿಯೂರುಕಟ್ಟೆ ಸರಕರಿ ಪಪೂ ಕಾಲೇಜು ಪ್ರಾಂಶುಪಾಲರಾದ ಹರಿಪ್ರಕಾಶ್ ಬೈಲಾಡಿ ಮೊದಲಾದವರು ಉಪಸ್ಥಿತರಿದ್ದರು.