ಪುತ್ತೂರು: ತಾಲೂಕಿನ ಅರಿಯಡ್ಕ ಗ್ರಾಮದ ಪಾದಲಾಡಿ ಎಂಬಲ್ಲಿ ಮನೆಯ ಸಿಟೌಟಿನ ಮೇಲ್ಚಾವಣಿ ಕುಸಿದು ಬಿದ್ದು ಕೆಲಗಡೆ ಕೆಲಸ ನಿರ್ವಹಿಸುತ್ತಿದ್ದ ಸೆಂಟ್ರಿಗ್ ಕೆಲಸದ ಶೇಖರ ಕುಲಾಲ್ ಹಾಗೂ ಕಾಂಟ್ರಾಕ್ಟರ್ ಸಂಜೀವ ಮೊಗೇರ ಎಂಬವರು ಗಾಯಗೊಂಡಿದ್ದಾರೆ.


ಗಂಭೀರ ಗಾಯಗೊಂಡ ಶೇಖರ್ ಕುಲಾಲ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ . ಗಾಯಗೊಂಡ ಇನ್ನೋರ್ವ ವ್ಯಕ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಅರಿಯಡ್ಕದ ದಿನೇಶ್ ಕುಲಾಲ್ ಎಂಬವರು ಸಹೋದರ ಶೇಖರ್ ಕುಲಾಲ್ ಎಂದು ಗುರುತಿಸಲಾಗಿದೆ.

ಕಾಂಕ್ರೀಟ್ ಆಗಿ ಸರಿಯಾಗಿ ಕ್ಯೂರಿಂಗ್ ಆಗದಿರುವಾಗ ಆ ಸ್ಥಳದಲ್ಲಿ ಕೆಲಸ ಮಾಡಿದರೆ ಜೀವಕ್ಕೆ ಅಪಾಯವಿದೆ ಎಂದು ಗೊತ್ತಿದ್ದರೂ ಶೇಖರ್ ಕುಲಾಲ್ ಅವರನ್ನು ಆ ಸ್ಥಳದಲ್ಲಿ ಕೆಲಸ ಮಾಡಿಸಿ ನಿರ್ಲಕ್ಷ್ಯತನ ತೋರಿದ್ದೆ ಸಾವಿಗೆ ಕಾರಣ ಎಂದು ಆರೋಪಿಸಿ ಕಾಂಟ್ರಾಕ್ಟರ್ ಹಾಗೂ ಮನೆಯೊಡತಿಯ ವಿರುದ್ಧ ಐಪಿಸಿ ಕಲಂ304(A) ರಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.