';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಹತ್ತೂರಿನ ಅಶ್ರಫ್ ಹೆಸರಿವರು ಒಂದೆಡೆ ಸೇರುವ ಅಪೂರ್ವ ಸಂಗಮವೊಂದಕ್ಕೆ ಇದೇ ಬರುವ ನವೆಂಬರ್ 5ರಂದು ಪುತ್ತೂರು ಸಾಕ್ಷಿಯಾಗಲಿಕ್ಕಿದೆ.
ಕೇರಳದಲ್ಲಿ ಯಶಸ್ವಿ ಸಾಮಾಜಿಕ ಕೆಲಸಗಳ ಮೂಲಕ, ಸಮಾಜಮುಖಿಯಾಗಿ ತೊಡಗಿಸಿಕೊಂಡ ಅಶ್ರಫ್ ಹೆಸರಿನವರ “ಅಶ್ರಫ್ ಒಕ್ಕೂಟ” ಸಂಘಟನೆಯೂ, ಇದೀಗ ಕರ್ನಾಟಕದಲ್ಲಿ ಕೂಡ ಅಸ್ತಿತ್ವಗೊಂಡಿದ್ದು, ಇದರ ನೂತನ ಸಮಿತಿ ರಚನೆ ಸಭೆ ಹಾಗು ಸಮಾವೇಶ, ಇದೇ ಬರುವ ನವೆಂಬರ್ 5ರಂದು ಪುತ್ತೂರಿನಲ್ಲಿ ನಡೆಯಲಿದೆ.
ರಾಜ್ಯದ ವಿವಿದೆಡೆ ಇರುವ ಅಶ್ರಫ್ ಹೆಸರಿನವರನ್ನು “ಅಶ್ರಫ್ ಒಕ್ಕೂಟ ಕರ್ನಾಟಕ” ಎಂಬ ಸಂಘಟನೆಯಡಿ ಸೇರಿಸಿ, ಪರಸ್ಪರ ಪರಿಚಯಸ್ಥರನ್ನಾಗಿ ಮಾಡಿಸುವುದು ಮತ್ತು ಸಂಘಟನೆಯಡಿ ಸಾಮಾಜಿಕ ಕೆಲಸಗಳನ್ನು ಮಾಡಬೇಕೆನ್ನುವುದು ಸಂಘಟನೆಯ ಉದ್ದೇಶ.
ಪ್ರವಾದಿ ಮಹಮ್ಮದರ ಹೆಸರಿನಲ್ಲೂ ಅಶ್ರಫ್ ಇರುವುದರಿಂದ, ಅಶ್ರಫ್ ಹೆಸರಿಗೆ ಒಂದು ಪ್ರತೀತಿ ಇದೆ. ಅದೇ ಕಾರಣಕ್ಕಾಗಿ ಅಶ್ರಫ್ ಒಕ್ಕೂಟ ಸಂಘಟನೆಯಡಿ, ಜನಪರ ಕೆಲಸ ಮಾಡಬೇಕೆನ್ನುವುದು ಸಂಘಟನೆಯ ಉದ್ದೇಶ ಎಂದು ಆಯೋಜಕರು ತಿಳಿಸಿದ್ದಾರೆ.