ಸೌದಿ ಅರೇಬಿಯಾ: ಅಲ್ ಮದೀನತುಲ್ ಮುನವ್ವರ ಮೂಡಡ್ಕ, ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾ ಸಭೆಯು ಜನಾಬ್ ಅಬ್ದುಲ್ ರಶೀದ್ ಹಾಜಿ ಬೆಳ್ಳಾರೆ, ಅಲ್-ಕೋಬಾರ್ ಅವರ ನಿವಾಸದಲ್ಲಿ ದಿನಾಂಕ 12-Jan-2024 ರಂದು ನಡೆಯಿತು.
ಸಂಸ್ಥೆಯ ಜನರಲ್ ಮಾನೇಜರ್ ಬಹುಃ ಅಶ್ರಫ್ ಸಖಾಫಿ ಉಸ್ತಾದರ ದುಆದೊಂದಿಗೆ ಆರಂಭಗೊಂಡು, ಬಹುಃ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ ಖಿರಾಅತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ T H ಸಭಿಕರನ್ನು ಸ್ವಾಗತಿಸಿ ನಂತರ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು.
ರಾಷ್ಟ್ರೀಯ ನಾಯಕರಾದ ಬಹುಃ ಅಬ್ದುಲ್ ರಝಾಕ್ ಉಸ್ತಾದ್ ಮಾಚಾರ್ ಅವರು ಹಿತೋಪದೇಶಗಳನ್ನು ನೀಡೀ ಸಭೆಯನ್ನು ಉಧ್ಘಾಟಿಸಿದರು.
ಬಹುಃ ಅಬ್ದುಲ್ ರಶೀದ್ ಹಾಜಿ, ಬೆಳ್ಳಾರೆ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡಿ ಸಂಸ್ಥೆಯ ಅಭಿವ್ರಧ್ದಿಗಾಗಿ ಎಲ್ಲರೂ ಸಹಾಯ ಸಹಕಾರವನ್ನು ಮುಂದುವರಿಸಬೇಕೆಂದು ವಿನಂತಿಸದರು.
ಜನರಲ್ ಮಾನೇಜರ್ ಬಹುಃ ಅಶ್ರಫ್ ಸಖಾಫಿ ಉಸ್ತಾದರು ಹಾಲಿ ಸಮಿತಿನ್ನು ಬರ್ಖಾಸ್ತು ಮಾಡಿ ಹೊಸ ಸಮಿತಿ ರಚನೆಗೆ ಅನುವು ಮಾಡಿಕೊಟ್ಟರು.
2024-2025 ರ ಅವಧಿಗೆ ಒಟ್ಟು 8 ಸದಸ್ಯರನ್ನೊಳಗೊಂಡ ಹೊಸ ಕ್ಯಾಬಿನೆಟ್ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ
ಅಬ್ದುಲ್ ರಶೀದ್ ಹಾಜಿ, ಬೆಳ್ಳಾರೆ – ಅಲ್-ಕೊಬಾರ್.
ಪ್ರಧಾನ ಕಾರ್ಯದರ್ಶಿಯಾಗಿ
ಹಬೀಬುಲ್ಲಾ T H, ತೆಕ್ಕಾರು – ರಿಯಾದ್.
ಕೋಶಾಧಿಕಾರಿಯಾಗಿ
ದಾವೂದ್ ಹಾಜಿ ಕಜೆಮಾರ್ ರಿಯಾದ್ ಉಪಾಧ್ಯಕ್ಷರಾಗಿ
ಅಬ್ದುಲ್ ಹಕೀಮ್ ಮೇದರಬೊಟ್ಟು, ಜುಬೈಲ್
ಉಮರ್ ಹಾಜಿ ಅಳಕೆಮಜಲು, ದಮಾಮ್ ಸಹ ಕಾರ್ಯದರ್ಶಿಯಾಗಿ
ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ, ದಮಾಮ್
ಸಂಚಾಲಕರಾಗಿ ಅಬ್ದುಲ್ ರಝಾಕ್ ಉಸ್ತಾದ್ ಮಾಚಾರ್ ರವರನ್ನು ಆಯ್ಕೆ ಮಾಡಲಾಯಿತು.
ಸಂಸ್ಥೆಯ ಸೌದಿ ಅರೇಬಿಯಾ ಆರ್ಗನೈಝರ್ ಅಬ್ದುಲ್ ಕರೀಮ್ ಲತ್ವೀಫಿ, ದಾರುಲ್ ಹಿಕ್ಮ ಸಂಸ್ಥೆಯ ಸೌದಿ ಅರೇಬಿಯಾ ಆರ್ಗನೈಝರ್ ಅಬ್ಬಾಸ್ ಮುಸ್ಲಿಯಾರ್ ಹಾಗು ಝಾಕಿರ್ ಹಾಜಿ ಬೆಳ್ಳಾರೆ ವೇದಿಕೆಯಲ್ಲಿದ್ದರು.
ಮೂಡಡ್ಕ ರಿಯಾದ್ ಸಮಿತಿಯ ಅಧ್ಯಕ್ಷರಾದ ಬಹುಃ ಯೂಸುಫ್ ಹಾಜಿ ಕಳಂಜಿಬೈಲು ಧನ್ಯವಾದ ಹೇಳಿದರು.