ಪುತ್ತೂರು: ಸಂಪ್ಯದ ಕಲ್ಲರ್ಪೆ ಬಳಿ ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕಲ್ಲಿದ್ದ ಯುವಕ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ತಲೆಗೆ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಯುವಕನ ಬಲದ ಕಾಲು ಎರಡು ಕಡೆ ಫ್ಯಾಕ್ಟರ್ ಆಗಿದ್ದು ತಲೆಗೂ ಗಾಯವಾಗಿ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದು ಇದೀಗ ಯುವಕನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಯುವಕನ ಸ್ಥಿತಿಯ ಬಗ್ಗೆ ವೈದ್ಯರು ಇನ್ನೂ ವ್ಯಕ್ತವಾದ ಮಾಹಿತಿ ನೀಡದಿರುವ ಕಾರಣ ಯುವಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕನನ್ನು ಮುಕ್ವೆಯ ಸಫ್ವಾನ್ ಎಂದು ತಿಳಿದು ಬಂದಿದ್ದು ಯುವಕನನ್ನು ಮಂಗಳೂರಿಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಯುವಕನನ್ನು ಆಂಬುಲೆನ್ಸ್ ಮೂಲಕ ಸಾಗಿಸಿದ್ದು ಪುತ್ತೂರಿನ ಕೆಎಲ್ 17 ಮಂಚು ಹಾಗೂ ಅವರ ತಂಡದವರು ಯುವಕನನ್ನು ಸಮಯಕ್ಕೆ ಸರಿಯಾಗಿ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.