dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ನಿನ್ನೆ ಸಂಜೆ ಕಲ್ಲರ್ಪೆಯಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೋರ್ವ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಮುಕ್ವೆಯ
ಸಫ್ವಾನ್ (20) ಎಂದು ಗುರುತಿಸಲಾಗಿದೆ.

ಭೀಕರ ಅಪಘಾತದಲ್ಲಿ ಯುವಕನಿಗೆ ಗಂಭೀರ ಗಾಯವಾಗಿದ್ದು ಆತನ ದೇಹವು ಚಿಕಿತ್ಸೆಗೆ ಸ್ಪಂದಿಸದೆ ಇರುವುದೇ ಮೃತಪಡಲು ಮುಖ್ಯ ಕಾರಣ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

ತಲೆಗೆ ಗಂಭೀರ ಗಾಯಗೊಂಡು ಮೆದುಳಿನ ಭಾಗಕ್ಕೆ ರಕ್ತ ಸೋರಿಕೆ ಗೊಂಡು ಬಿಪಿ ಸಂಪೂರ್ಣ ಡೌನ್ ಆದ ಕಾರಣ ವೈದ್ಯರಿಗೂ ಚಿಕಿತ್ಸೆ ನೀಡುವ ಅವಕಾಶ ಕೂಡ ಇಲ್ಲದಂತಾಗಿದ್ದು ನೀಡಿದ ಚಿಕಿತ್ಸೆಗೆ ಯುವಕನ ದೇಹ ಸ್ಪಂದಿಸದೆ ಮಧ್ಯರಾತ್ರಿ 3 ಗಂಟೆಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆಯ ವಿವರ:
ಸಂಪ್ಯದ ಕಲ್ಲರ್ಪೆ ಬಳಿ ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕಲ್ಲಿದ್ದ ಯುವಕ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿತ್ತು.

'; } else { echo "Sorry! You are Blocked from seeing the Ads"; } ?>

ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ತಲೆಗೆ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಯುವಕನ ಬಲದ ಕಾಲು ಫ್ಯಾಕ್ಟರ್ ಆಗಿದ್ದು ತಲೆಗೂ ಗಾಯವಾಗಿ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಖಾಸಗಿ ಆಸ್ಪತ್ರೆಗೆ ರವಾನಿಸಿಲಾಗಿತ್ತು. ನಂತರ ಯುವಕನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದರು ಆ ಸಂದರ್ಭದಲ್ಲಿ ಯುವಕನ ಸ್ಥಿತಿಯ ಬಗ್ಗೆ ವೈದ್ಯರು ವ್ಯಕ್ತವಾದ ಮಾಹಿತಿ ನೀಡದಿರುವ ಕಾರಣ ಯುವಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿತ್ತು.

ಯುವಕನನ್ನು ತಕ್ಷಣ ಆಂಬುಲೆನ್ಸ್ ಮೂಲಕ ಸಾಗಿಸಲು ಪುತ್ತೂರಿನ ಕೆಎಲ್ 17 ಮಂಚು ಹಾಗೂ ಅವರ ತಂಡದವರು ಸಮಯಕ್ಕೆ ಸರಿಯಾಗಿ ಸಹಕರಿಸಿ ಮಾನವೀಯತೆ ಮೆರೆದಿದ್ದು ಮಧ್ಯರಾತ್ರಿವರೆಗೂ ಆಸ್ಪತ್ರೆಯ ಮುಂಬಾಗದಲ್ಲಿದ್ದ ಗೆಳೆಯರ ಬಳಗ ಯುವಕನಿಗಾಗಿ ಪ್ರಾರ್ಥಿಸುತ್ತಿರುವ ದೃಶ್ಯ ಕಂಡು ಬಂದಿತ್ತು. ಆದರೆ ಇದೀಗ ಎಲ್ಲರ ಕನಸನ್ನು ಹುಸಿಗೊಳಿಸಿದ ಯುವಕನು ಇಹಲೋಕ ತ್ಯಜಿಸಿದ್ದಾನೆ.ಕುಟುಂಬಸ್ಥರ ದುಃಖ ಕಂಡು ಎಲ್ಲರೂ ಮೌನಕ್ಕೆ ಶರಣಾಗಿದ್ದು ಇಂದು ಮಧ್ಯಾನ್ಹ 11 ಗಂಟೆಯ ಒಳಗಾಗಿ ಮೃತದೇಹ ಮನೆಗೆ ತಲುಪಲಿದೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!