dtvkannada

ಪುತ್ತೂರು: ನಗರದ ಮುರದಲ್ಲಿ ಇದೀಗ ಎಂಪಿಎಂ ಸ್ಕೂಲ್ ಬಳಿ ಸ್ಕೂಟರ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಒರ್ವ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಸ್ಕೂಟರ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಒರ್ವ ಇದೀಗ ಮೃತಪಟ್ಟ ಬಗ್ಗೆ ವರದಿ ಬರುತ್ತಿದೆ.

ಸ್ಕೂಟರ್ ಪುತ್ತೂರಿನಿಂದ ಕಬಕ ಕಡೆಗೆ ಚಲಿಸುತ್ತಿದ್ದ ವೇಳೆ ಕಬಕದಿಂದ ಪುತ್ತೂರ ಕಡೆ ಬರುತ್ತಿದ್ದ ಟಿಪ್ಪ‌ರ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!