dtvkannada

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ರಾಗಿದಕುಮೇರು ಬಳಿಯ ಕಡ್ಲಿಮಾರ್ ಎಂಬಲ್ಲಿ ಗೇರು ತೋಪಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಗೇರು ಗಿಡಗಳು ನಾಶವಾದ ಘಟನೆ ಫೆ. ೨೫ ರಂದು ಸಂಜೆ ನಡೆದಿದೆ.

ನೂರಾರು ಗೇರು ಗಿಡಗಳಿರುವ ಗುಡ್ಡದಲ್ಲಿ ಒಂದು ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಇಡೀ ಗೇರು ತೋಪಿಗೆ ಆವರಿಸಿತ್ತು. ದಿವಾಕರ ರೈ ಎಂಬವರಿಗೆ ಸೇರಿದ ಗೇರು ತೋಟದಲ್ಲಿ ಹೇಗೆ ಬೆಂಕಿ ಹತ್ತಿಕೊಂಡಿದೆ ಎಂಬುದು ಗೊತ್ತಾಗಿಲ್ಲ. ತೋಟದ ಕೆಳಭಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು ಅದರಿಂದ ಶಾರ್ಟ್ ಆಗಿ ಬೆಂಕಿ ಕಿಡಿ ರಟ್ಟಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಹೂ ಬಿಡಲು ಸಿದ್ದವಾದ ನೂರಾರು ಗಿಡಗಳು ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಸಫಲವಾಗಲಿಲ್ಲ.

ಅಗ್ನಿಶಾಮಕ ದಳದ ಜೊತೆ ಸೇರಿಕೊಂಡ ಶಾಸಕರು- ಪುರುಷರಕಟ್ಟೆ ಕ್ರಿಕೆಟ್ ಪಂದ್ಯಾಟ ಕಾರ್ಯಕ್ರಮ ಮುಗಿಸಿ ಬೆದ್ರಾಳ ಮೂಲಕ ಉಪ್ಪಿನಂಗಡಿಗೆ ತೆರಳುವ ದಾರಿ ಮಧ್ಯೆ ಸಾಲ್ಮರ  ತಪುಪುವ ವೇಳೆ ಅಗ್ನಿಶಾಮಕ ವಾಹನ ತೆರಳುತ್ತಿರುವುದನ್ನು ಗಮನಿಸಿದ ಶಾಸಕರು ಅವರ ಜೊತೆಯೇ ತೆರಳಿದರು. ತಕ್ಷಣವೇ ಹೊತ್ತಿಉರಿಯುತ್ತಿದ್ದ ಕಡೆಗೆ ತೆರಳಿದ ಶಾಸಕರು ಬೆಂಕಿ ನಂದಿಸುವಲ್ಲಿ ಯತ್ನ ಮಾಡಿದರು. ಬಳಿಕ ಅಗ್ನಿ ಶಾಮಕದಳದ ಸಿಬಂದಿಗಳ ಜೊತೆ ನೀರು ಹಾಯಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

ಶಾಸಕರ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ- ಸ್ವತ ಶಾಸಕರೇ ಸೊಪ್ಪು ಹಿಡಿದು ಬೆಂಕಿ ನಂದಿಸಲು ಯತ್ನಿಸಿದ್ದು ಮತ್ತು ಸುದ್ದಿ ತಿಳಿದು ಸ್ಥಳಕ್ಕೆ ಬಂದ ವಿಚಾರ ಗ್ರಾಮಸ್ದರ ಶ್ಲಾಘನೆಗೆ ಕಾರಣವಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯರು ಇಂಥಹ ಶಾಸಕರನ್ನು ನಾವು ನೋಡೇ ಇಲ್ಲ ಎಂದು ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಾಸಕರ ಜೊತೆಗಿದ್ದ ಕೋಡಿಂಬಾಡಿ ಗ್ರಾಪಂ ಉಪಾದ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಉದ್ಯಮಿ ನಿಹಾಲ್ ಶೆಟ್ಟಿ , ರಾಕೇಶ್ ಶೆಟ್ಟಿ ಕುದ್ಕಾಡಿ ಮೊದಲಾದವರು ಬೆಂಕಿ ನಂದಿಸುವಲ್ಲಿ ಶಾಸಕರ ಜೊತೆ ಸೇರಿಕೊಂಡರು.

By dtv

Leave a Reply

Your email address will not be published. Required fields are marked *

error: Content is protected !!