ಪುತ್ತೂರು: ಕಳೆದ ಚುನಾವಣೆ ಸಂದರ್ಭದಲ್ಲಿ ಪುತ್ತಿಲರಿಗೆ ಟಿಕೆಟ್ ನಿರಾಕರಿಸಿದ ಸಂದರ್ಭದಲ್ಲಿ ಪುತ್ತಿಲ ಪರಿವಾರ್ ಎಂಬ ಸಂಘಟನೆ ಕಟ್ಟಿಕೊಂಡು ತನ್ನದೇ ಆದ ಶೈಲಿಯಲ್ಲಿ ಈ ಮೂಲಕ ರಾಜ್ಯದಲ್ಲಿ ಸುದ್ದಿಯಾಗಿದ್ದರು.
ಕೊನೆಗೆ ಕಾರ್ಯಕರ್ತರು ಒತ್ತಾಯದಂತೆ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ರಾಜ್ಯದಲ್ಲಿ ಬಿಜೆಪಿ ಮುಖಭಂಗ ಅನುಭವಿಸುವಂತೆ ಮಾಡಿದ್ದರು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಒಟು ಸಿಗುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಗೊಂಡಿತ್ತು.
ಇದೀಗ ಹಲವು ಸುತ್ತಿನ ಮಾತುಕತೆ,ಗಡುವು, ಷರತ್ತುಗಳ ನಡುವೆಯೇ ಅರುಣ್ ಕುಮಾರ್ ಪುತ್ತಿಲರು ಅಧಿಕೃತವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ ಗೊಂಡಿದ್ದಾರೆ.
ಈ ಒಂದು ಸಂಘಟನೆ ಹುಟ್ಟಿಕೊಂಡಿದ್ದು ಪುತ್ತೂರಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನೀಡದ ಉದ್ದೇಶ ಮತ್ತು ಕಾರ್ಯಕರ್ತರ ನೋವನ್ನು ಬಿಜೆಪಿ ಪಕ್ಷ ಅರ್ಥ ಮಾಡಿಕೊಂಡಿಲ್ಲ ಎಂಬ ಉದ್ದೇಶದಿಂದ ಆಗಿದ್ದು ವಿಧಾನಸಭಾ ಕಳೆದ ನಂತರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸಲಿದ್ದೇವೆ ಎನ್ನುವ ಮಾತನ್ನು ಹೊರಡಿಸಿದ್ದ ಪರಿವಾರ್ ಇದೀಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಬ್ರಿಜೇಶ್ ಚೌಟ ಕಣಕ್ಕಿಳಿದಿದ್ದು ಪುತ್ತಿಲರಿಗೆ ಈ ಭಾರಿಯ ಅವಕಾಶ ಕೂಡ ಕಳೆದುಕೊಂಡಿದ್ದಾರೆ.
ಇದೀಗ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ ಗೊಂಡಿದ್ದು ಈಗ ಪುತ್ತಿಲರಿಗೆ ಯಾವ ಸ್ಥಾನಮಾನ ಬಿಜೆಪಿಯಲ್ಲಿ ಸಿಗಲಿದೆ ಎಂದು ಕಾದು ನೋಡಬೇಕಾಗಿದೆ.ಜೊತೆಗೆ ಮುಂದಿನ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪುತ್ತಿಲರಿಗೆ ಅವಕಾಶ ಸಿಗಬಹುದೇ ಎಂದು ಕೂಡ ನೋಡಬೇಕಾಗಿದೆ.ಒಟ್ಟಿನಲ್ಲಿ ಬಿಜೆಪಿ ಸೇರ್ಪಡೆ ಯೊಂದಿಗೆ ಪುತ್ತಿಲ ಪರಿವಾರ್ ಸಂಘಟನೆ ಬಿಜೆಪಿಯೊಂದಿಗೆ ವಿಲೀನ ಗೊಂಡಿದೆ.
ಈ ಸಂದರ್ಭದಲ್ಲಿ ಸಂಸದ ಸುನಿಲ್ ಕುಮಾರ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪುತ್ತೂರು ಮಂಡಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪಿಜಿ ಜಗನ್ನಿವಾಸ್ ರಾವ್, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.