ಪುತ್ತೂರು: ಬಿಜೆಪಿ ಕಾರ್ಯಕರ್ತರೊಬ್ಬರು ಫೆಸುಬುಕ್ಕಿನಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರ ಅಭಿವೃದ್ಧಿ ಕಾಮಗಾರಿಗಳ ತಪ್ಪು ಲೆಕ್ಕ ಕೊಟ್ಟಿದ್ದಾರೆ ಅದು ನಿಜವಾಗಿದ್ದರೆ ಅದರ ಲೆಕ್ಕಗಳನ್ನು ನೀಡಿ ಎಂದು ಕೇಳಿದಕ್ಕೆ ಅಶೋಕ್ ರೈಗಳ ವಾರಿಯರ್ಸ್ ಪಡೆ ಎಂಬ ತಂಡ ನೇರವಾಗಿ ಅವರ ಮನೆಗೆ ಚೆಂಡೆ, ಬ್ಯಾಂಡಿನೊಂದಿಗೆ ತೆರಳಿ ಬ್ಯಾನರಿನಲ್ಲಿ ಸಂಪೂರ್ಣ ಕಾಮಾಗಾರಿಗಳ ಮಾಹಿತಿ ಇರುವ ಲೆಕ್ಕಗಳನ್ನು ನೀಡಿದ್ದು ಈ ಸಂದರ್ಭದಲ್ಲಿ ಆಗಮಿಸಿದ ತಂಡಗಳ ಮತ್ತು ಬಿಜೆಪಿ ಕಾರ್ಯಕರ್ತನ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದ ವಾಗಿದ್ದು ಇದರ ವೀಡಿಯೋ ಕೂಡ ವೈರಲ್ ಆಗಿದ್ದು ಇದೀಗ ಠಾಣೆಯಲ್ಲಿ ಇದರ ಬಗ್ಗೆ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿದೆ.
ಬಿಜೆಪಿ ಕಾರ್ಯಕರ್ತರಾದ ಜಯಾನಂದ ಕೆ ಎಂಬವರ ಮನೆಗೆ ಇಂದು ಸಂಜೆ ಸುಮಾರು ನಾಲ್ಕು ಗಂಟೆಗೆ ವಾರಿಯರ್ಸ್ ತಂಡದ ಪ್ರಜ್ವಲ್ ರೈ, ಸನತ್ ರೈ ಮತ್ತು 15 ಜನರು ಮನೆಯ ಕಾಂಪೌಂಡ್ ಒಳಗೆ ಅಕ್ರಮ ಪ್ರವೇಶ ಮಾಡಿ ಜಯಾನಂದರರನ್ನು ಉದ್ದೇಶಿಸಿ ನೀನು ಬಾರಿ ಪೇಸ್ ಬುಕ್ ನಲ್ಲಿ, ಬರೆಯುತ್ತಿಯಾ?” ಎಂದು ಗದರಿಸಿ “ನಿನ್ನನ್ನು ನೋಡಿಕೊಳ್ಳುತ್ತೇನೆ” ಎಂಬುದಾಗಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಇವರ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ.
ಘಟನೆ ಬಗ್ಗೆ ಆರೋಪಿ ಗಳ ವಿರುದ್ಧಪುತ್ತೂರು ನಗರ ಪೊಲೀಸ್ IPC 1860(U/s-448,143,147,504,506,149) ರಂತೆ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.ಸ್ಥಳಕ್ಕೆ ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ನಾಯಕರು ಬೇಟಿ ನೀಡಿದ್ದು ದ.ಕ ಲೋಕಸಭಾ ಚುನಾವಣಾ ಅಭ್ಯರ್ಥಿ ಬ್ರಿಜೇಶ್ ಚೌಟ ತನ್ನ ಅಕೌಂಟಿನಲ್ಲಿ ವೀಡಿಯೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.