ಬೆಳ್ತಂಗಡಿ: ತುಮಕೂರು ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣ ಸಂಬಂಧಿಸಿದಂತೆ ಓರ್ವ ಸ್ವಾಮಿಜಿ ಸೇರಿ 6 ಮಂದಿಗಳನ್ನು ಇಂದು ತುಮಕೂರು ಪೊಲೀಸರು ಹಡೆಮುರಿ ಕಟ್ಟಿದ್ದಾರೆ.
ಹತ್ತು ದಿನಗಳ ಹಿಂದೆ ವ್ಯವಹಾರಕೆಂದು ತುಮಕೂರುಗೆ ಹೋಗಿದ್ದ ಬೆಳ್ತಂಗಡಿಯ ಐದು ಮಂದಿಯಲ್ಲಿ ಮೂವರನ್ನು ಕಾರಿಗೆ ಬೆಂಕಿ ಹಾಕಿ ಸಜೀವ ದಹನಗೊಳಿಸಲಾಗಿತ್ತು.
ನಕಲಿ ಚಿನ್ನದ ದಂದೆಯ ಆಸೆಗೆ ಬಲಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಇನ್ನು ಬೆಳ್ತಂಗಡಿ ನಿವಾಸಿಗಳಾದ ಸಾಹುಲ್ ಹಮೀದ್ (45) ಇಸಾಕ್ (56) ಸಿದ್ದಿಕ್ (34) ಎಂಬವರ ಮೃತದೇಹ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ತುಮಕೂರುವಿನ ಕುಚ್ಚoಗಿ ಕೆರೆಯ ಬಳಿ ಪತ್ತೆಯಾಗಿತ್ತು.
ಮೂವರ ಶವಗಳು ಸಂಪೂರ್ಣವಾಗಿ ಸುಟ್ಟುಕರಕಲಾದ ಪರಿಸ್ಥಿತಿಯಲ್ಲಿ ಪತ್ತೆಯಾದರಿಂದ ಡಿ ಎನ್ ಎ ಪರೀಕ್ಷೆ ನಂತರವೇ ಮನೆ ಮಂದಿಗೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದೇವೆ ಈ ವರದಿಗೆ ಒಂದು ವಾರಗಳು ಬೇಕಾಗಿ ಬರಬಹುದು ಎಂದು ಕೋರ ಪೊಲೀಸರು ಕುಟುಂಬಸ್ಥರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.