ವೀಕೆಂಡ್ ಕರ್ಫ್ಯೂ
ಮಾನ ಇಲ್ಲದವರಿಗೆ
ಕುಡಿದು ಚರಂಡಿಗೆ ಬೀಳುವವರಿಗೆ
ಬಟ್ಟೆ ಯಾಕೆ ?
ಮುಂದೆ ಹೆಜ್ಜೆಯಿಡದವರಿಗೆ
ನಿಶ್ಚಲ ಆಡಳಿತಕ್ಕೆ ಚಪ್ಪಲಿ ಯಾಕೆ ?
ಜನ ಸಾಮಾನ್ಯರ
ಸಂಪರ್ಕ ಬೇಡದವರಿಗೆ
ಮೊಬೈಲ್ ಯಾಕೆ ?
ಅಗತ್ಯ ಅನಗತ್ಯ ವಸ್ತು
ತಿಳಿಯದವರಿಗೆ ಹಾಲು/ ಆಲ್ಕೋಹಾಲ್
ವ್ಯತ್ಯಾಸ ತಿಳಿದಿರಬೇಕೆ..?
ತಿಂಗಳ ಸಂಬಳ
ಸರಿಯಾಗಿ ಏಸಿ ರೂಮೊಳಗೆ ಕುಳಿತು
ಸಿಗುವವರಿಗೆ
ಬಡವರ ಹಸಿವು ತಿಳಿಸುವುದ್ಯಾಕೆ..?
ಪಾಸಿಟಿವ್ ದರ
ಏರು ಪೇರಾಗಲು ಚಿಲ್ಲರೆ
ಬಟ್ಟೆ,ಮೊಬೈಲ್, ಫ್ಯಾನ್ಸಿ,ಚಪ್ಪಲಿ
ಅಂಗಡಿಗಳೇ ಕಾರಣಕರ್ತರಾಗಬೇಕೆ ?
~ ✍ಜಮುಕ್ರಿ.